ತಾಪಂ ಇಒಗೆ ಅಕ್ಷರ ದಾಸೋಹ ನೌಕರರ ಮನವಿ

ಅರಕಲಗೂಡು: ಅಕ್ಷರ ದಾಸೋಹ ನೌಕರರಿಗೆ ಏಪ್ರಿಲ್ ಮತ್ತು ಮೇ ತಿಂಗಳ ವೇತನ ಪಾವತಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಕ್ರಮ ಕೈಗೊಳ್ಳುವಂತೆ ಅಗ್ರಹಿಸಿ ಅಕ್ಷರ ದಾಸೋಹ ನೌಕರರು ಬುಧವಾರ ತಾಪಂ ಇಒ ಎನ್. ರವಿಕುಮಾರ್ ಅವರಿಗೆ ಮನವಿ ಸಲ್ಲಿಸಿದರು. 

ಕೋವಿಡ್ ಸಂಕಷ್ಟಕ್ಕೆ ಸಿಲುಕಿ ಅಕ್ಷರ ದಾಸೋಹ ನೌಕರರು ಸಹ ಯಾತನೆ ಅನುಭವಿಸುತ್ತಿದ್ದಾರೆ. ಕಳೆದ ಎರಡು ತಿಂಗಳಿನಿಂದ ಸರ್ಕಾರದ ವೇತನವೂ ಇಲ್ಲ, ಲಾಕ್ ಡೌನ್ ಹಿನ್ನೆಲೆಯಲ್ಲಿ ಬೇರೆ ಕಾಯಕ ಮಾಡಿ ಕುಟುಂಬ ನಿರ್ಹಣೆ ನಡೆಸಲೂ ಅವಕಾಶವಿಲ್ಲವಾಗಿದೆ. ಸರ್ಕಾರ ಸಂಕಷ್ಟಕ್ಕೆ ಸ್ಪಂದಿಸಿ ಎರಡು ತಿಂಗಳ ವೇತನ ನೀಡಿ ನೌಕರರ ಕುಟುಂಬಕ್ಕೆ ಆಸರೆ ಒದಗಿಸಬೇಕು. ಇದರ ಸಂಗಡ ಕಳೆದ ಹಲವು ವರ್ಷಗಳಿಂದ ಮಂಡಿಸುತ್ತಾ ಬಂದಿರುವ ನೌಕರಿ ಖಾಯಂ ಗೊಳಿಸುವುದು, ವೇತನ ಹೆಚ್ಚಳ ಸೇರಿದಂತೆ ಇತರೆ ಬೇಡಿಕೆಗಳನ್ನು ಈ ಡೇರಿಸುವಂತೆ ಮವಿಯಲ್ಲಿ ಆಗ್ರಹಿಸಲಾಗಿದೆ ಎಂದು ಅಕ್ಷರ ದಾಸೋಹ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಯಶೋಧ ತಿಳಿಸಿದರು.

ಸಂಘದ ಶೋಭಾ, ಪೂರ್ಣಿಮಾ, ಜಯಮಲ, ಬೇಬಿ, ರಾಣಿ ಇದ್ದರು.

                     ಸಂಪಾದಕ - ರವಿ                       

Post a Comment

0 Comments