ಅರಕಲಗೂಡು: ಕೋವಿಡ್ ಸಂಕಷ್ಟ ಕಾಲದಲ್ಲಿ ಔಷಧಿ ಕಿಟ್ ನೀಡಿ ಜನರ ನೋವಿಗೆ ಸ್ಪಂದಿಸುವ ಸೇವಾ ಕಾರ್ಯವನ್ನು ಉದ್ಯಮಿ ಕೃಷ್ಣೇಗೌಡ ಅವರು ಮುಂದೆ ನಿಂತು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿರುವುದು ಸರ್ಕಾರದ ಕೆಲಸಗಳನ್ನು ನಾಚಿಸುವಂತಿದೆ.!!
ಕಳೆದ ಕೆಲ ವಾರಗಳಿಂದ ಕರೊನಾ ಸೋಂಕಿತರು ಹೆಚ್ಚಿರುವ ತಾಲೂಕಿನ ದೊಡ್ಡಮಗ್ಗೆ ಸರ್ಕಾರಿ ಆಸ್ಪತ್ರೆಗೆ ಸಮಾಜ ಸೇವಕ ಹಾಗೂ ಉದ್ಯಮಿ ಎಂ.ಟಿ. ಕೃಷ್ಣೇಗೌಡ ಅವರು ೧.೮೦ ಲಕ್ಷ ಮೌಲ್ಯದ ಮೆಡಿಸಿನ್ ಗಳನ್ನು ಕೊಡುಗೆಯಾಗಿ ನೀಡಿ ಮಾನವೀಯತೆ ಮೆರೆದರು.
ಕೋವಿಡ್ ಗೆ ಸಂಬಂಧಿಸಿದ ಔಷಧಿ ಮಾತ್ರೆಗಳು, ಮಾಸ್ಕ್, ಕೈ, ಮುಖ ಗವುಸುಗಳು, ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನ್, ಆರ್ ಎಲ್, ಡಿಎನ್ಎಸ್ ಗ್ಲೂಕೋಸ್ ಬಾಟಲ್ ಗಳು ಸೇರಿದಂತೆ ವಿವಿಧ ಮೆಡಿಸಿನ್ ಗಳನ್ನು ವಿತರಿಸಿ ಮಾತನಾಡಿದ ಕೃಷ್ಣೇಗೌಡ ಅವರು, ಮನುಷ್ಯನ ಬದುಕು ದುರ್ಬಲಗೊಳಿಸಿ ಜೀವವನ್ನೆ ಕಳೆಯುತ್ತಿರುವ ಮಹಾಮಾರಿ ಕರೊನಾ ತೊಲಗಿಸಲು ಕೆಲವರಿಂದ ಸಾಧ್ಯವಿಲ್ಲ. ಸರ್ಕಾರದ ಜತೆಗೆ ಪ್ರತಿಯೊಬ್ಬರೂ ಕೈಜೋಡಿಸಿ ಬಡವರು, ನಿರ್ಗತಿಕರ ಅನುಕೂಲಕ್ಕಾಗಿ ಕೈಲಾದ ಸಹಾಯ ಮಾಡಿ ಕರೊನಾ ಮುಕ್ತವಾಗಿಸಬೇಕು. ಅರಕಲಗೂಡಿನಲ್ಲಿ ಬಡವರಿಗೆ ಆಹಾರ ನೀಡುತ್ತಿರುವೆ, ಮುಂದಿನ ದಿನಗಳಲ್ಲಿ ರಾಮನಾಥಪುರ, ಕೊಣನೂರು ಆಸ್ಪತ್ರೆಗಳಿಗೆ ಮೆಡಿಸಿನ್ ನೀಡಲಾಗುವುದು. ಇಲ್ಲಿನ ರೋಗಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದ್ದು ಸಾರ್ವಜನಿಕರ ನೋವಿಗೆ ಸ್ಪಂದಿಸಲಾಗಿದೆ ಎಂದು ತಿಳಿಸಿದರು.
ಆಸ್ಪತ್ರೆ ವೈದ್ಯಾಧಿಕಾರಿ ಡಾ. ನಮೃತ ಮಾತನಾಡಿ, ಜಿಲ್ಲಾ ಆಸ್ಪತ್ರೆಯಿಂದ ಕೊಟ್ಟಿರುವ ಔಷಧಿ ಮಾತ್ರೆಗಳು ಮುಗಿಯುತ್ತಿದ್ದು ಸೋಂಕಿತರಿಗೆ ನೆರವಾಗುವ ನಿಟ್ಟಿನಲ್ಲಿ ಕೃಷ್ಣೇಗೌಡರು ಸಹಾಯ ಹಸ್ತ ಚಾಚುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
0 Comments