ಅರಕಲಗೂಡು 10ರಂದು ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಸ್ವಾಗತಕ್ಕೆ ಸಿದ್ದತೆ; ಯೋಗಾರಮೇಶ್

ಅರಕಲಗೂಡು: ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸಿ ಪಕ್ಷದ ಘಟನೆ ಬಲಪಡಿಸುವ ಉದ್ದೇಶದಿಂದ ಮಾ. 10 ರಂದು ತಾಲೂಕಿಗೆ ಆಗಮಿಸುವ ವಿಜಯ ಸಂಕಲ್ಪ ಯಾತ್ರೆ  ರಥ ಸ್ವಾಗತಿಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಎಚ್. ಯೋಗಾರಮೇಶ್ ತಿಳಿಸಿದರು.

ಕಾಂಗ್ರೆಸ್ ಮತ್ತು ಜೆಡಿಎಸ್ ತರ ಬಿಜೆಪಿ ಪುಕ್ಕಟೆ ಪ್ರಚಾರ ಪಡೆದುಕೊಳ್ಳುವ ಪಕ್ಷವಲ್ಲ. ರೈತರು, ಕಾರ್ಮಿಕರ, ದೀನ ದಲಿತರ ಸರ್ವತೋಮುಖ ಏಳಿಗೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೊಳಿಸಿ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿವೆ. ಪಕ್ಷದ ಸಾಧನೆಗಳನ್ನು ಪ್ರತಿ ಮನೆಗೂ ತಲುಪಿಸಲಾಗುವುದು. ಮಾ. 10ರಂದು ಹೊಳೆನರಸೀಪುರ ಮಾರ್ಗವಾಗಿ ತಾಲೂಕಿಗೆ ಆಗಮಿಸುವ ವಿಜಯ ಸಂಕಲ್ಪ ರಥವನ್ನು ಗಡಿ ಭಾಗದ ಬೂವನಹಳ್ಳಿ ಕ್ರಾಸ್ ನಲ್ಲಿ ಬೈಕ್ ರ್ಯಾಲಿ ಮೂಲಕ ಸ್ವಾಗತಿಸಲಾಗುವುದು. ಅನಕೃ ಮತ್ತು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗುವುದು. ಗ್ರಾಮದೇವತೆ ದೊಡ್ಡಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಸಾರ್ವಜನಿಕ ಸಭೆ ನಡೆಸಲಾಗುವುದು. ಪಕ್ಷದ ನಾಯಕರು, ಮುಖಂಡರು, ಕಾರ್ಯಕರ್ತರು ಪಾಲ್ಗೊಳ್ಳುವರು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸ್ವಾರ್ಥ ಸಾಧನೆಗಾಗಿ ಕ್ಷುಲ್ಲಕ ರಾಜಕಾರಣ ನಡೆಸುತ್ತಿರುವ ಎ. ಮಂಜು ಮತ್ತು ಎ.ಟಿ. ರಾಮಸ್ವಾಮಿ ಕಾಂಗ್ರೆಸ್, ಜೆಡಿಎಸ್ ನಲ್ಲಿ ಅಧಿಕಾರ ಅನುಭವಿಸಿ ಈಗ ಆ ಪಕ್ಷಗಳಿಗೆ ಮತ್ತು ಕಾರ್ಯಕರ್ತರಿಗೆ ಮೋಸ ಮಾಡಲು ಹೊರಟಿದ್ದಾರೆ. ಮತದಾರರು ಇವರ ನಡವಳಿಕೆಗೆ ಬೇಸತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಮಂತ್ರಿಯಾಗಿ ಪಕ್ಷ ತೊರೆದು ಸಿದ್ದರಾಮಯ್ಯ ಅವರಿಗೆ ದ್ರೋಹ ಬಗೆದ ಎ. ಮಂಜು ಮತ್ತೆ ಬಿಜೆಪಿಗೆ ಸೇರಿ ಹಳೇ ಪಕ್ಷವನ್ನು ಬಿಡುವುದಿಲ್ಲ ಎಂದು ಕಾರ್ಯಕರ್ತರಿಗೆ ನೀಡಿದ್ದ ಮಾತು ಹುಸಿಗೊಳಿಸಿದ್ದಾರೆ. ಈಗ ತಾವೇ ಜೆಡಿಎಸ್ ಅಭ್ಯರ್ಥಿ ಎಂದು ಸ್ವಯಂ ಘೋಷಿತವಾಗಿ ಪ್ರಮಾಣ ವಚನ ಮಾಡಿಕೊಂಡಿರುವುದು ಮಾಡಿಕೊಂಡಿರುವುದು ಹಾಸ್ಯಾಸ್ಪದ. ಕುಮಾರಣ್ಣ ಮತ್ತು ರೇವಣ್ಣ ಅವರ ನಡುವಿನ ಅಂತಕಲಃದ ರಾಜಕಾರಣ ಮಂಜುಗೆ ಮುಳುವಾಗಲಿದೆ. ಕಾಂಗ್ರೆಸ್, ಬಿಜೆಪಿಗೆ ಮೋಸ ಮಾಡಿದಂತೆ ಮಂಜು ಜೆಡಿಎಸ್ ಗೂ ಮಗ್ಗಲು ಮುಳ್ಳಗಲಿದ್ದಾರೆ ಎಂದು ಟೀಕಿಸಿದರು.

ಯಾರ ಮನೆ ಬಾಗಿಲಿಗೂ ಹೋಗಲ್ಲ ಎಂದಿದ್ದ ಶಾಸಕ ಎ.ಟಿ. ರಾಮಸ್ವಾಮಿ ಈಗ ತಮ್ಮ  ಅವಕಾಶಕ್ಕಾಗಿ ತಮ್ಮ ಪುತ್ರ ಹಾಗೂ ಹಿಂಬಾಲಕರ ಮೂಲಕ ರಾಷ್ಟ್ರೀಯ ಪಕ್ಷಗಳ ಬಾಗಿಲು ತಟ್ಟುತ್ತಿರುವುದು ಜಗಜ್ಜಾಹೀರಾಗಿದೆ. ಜೆಡಿಎಸ್ ನಲ್ಲಿ ಅಧಿಕಾರ ಅನುಭವಿಸಿ ಹೊರ ನಡೆಯುತ್ತಿದ್ದಾರೆ. 

ರಾಜಕೀಯವಾಗಿ ಬೆಂಬಲ ನೀಡಿದ ಮಗ್ಗೆ ಕುಟುಂಬದ ವವಿರುದ್ದ ಉಸಿರು ಬಿಡುವುದಾಗಿ ಹೇಳುವ ಶಾಸಕರು ಜತೆಯಲ್ಲಿದ್ದವರಿಗೆ ಕೆಟ್ಟದ್ದು ಬಯಸುವ ಕೊಳಕು ಮಂಡಲ ಇದ್ದಂತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೊರಟಿಕೆರೆ ಪ್ರಕಾಶ್ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಬಿಜೆಪಿ123 ಸ್ಥಾನ ಗಳಿಸುವ ಗುರಿ ಸಾಧಿಸಲಿದ್ದು ಇದಕ್ಕಾಗಿ ವಿಜಯ ಸಂಕಲ್ಪ ಯಾತ್ರೆ ನಡೆಸುತ್ತಿದ್ದು ಕಾರ್ಯಕರ್ತರು ಸಂಘಟಿತರಾಗಬೇಕು ಎಂದರು.

ತಾಲೂಕು ಬಿಜೆಪಿ ಅಧ್ಯಕ್ಷ ಎಂ.ಟಿ. ಸತ್ಯನಾರಾಯಣ, ಪ್ರಧಾನ ಕಾರ್ಯದರ್ಶಿ ಬಿ.ಜೆ. ಶ್ರೀನಿವಾಸ್, ಲೋಕೇಶ್, ಮುಖಂಡರಾದ ರಾಮಣ್ಣ, ಪುನೀತ್ ಗೋಷ್ಠಿಯಲ್ಲಿದ್ದರು.

Post a Comment

0 Comments