ಹೆಚ್ಚುವರಿ, ಅನಧಿಕೃತ ತಂಬಾಕು ಮಾರಾಟಕ್ಕೆ ತನ್ನಿ: ಎಂ. ಲಕ್ಷ್ಮಣ್ ರಾವ್ ರೈತರಿಗೆ ಸೂಚನೆ

ಅರಕಲಗೂಡು: ಪುಸ್ತುತ 2022-23 ಸಾಲಿನಲ್ಲಿ ತಂಬಾಕು ಮಂಡಳಿಯು ಹರಾಜು ಮಾರುಕಟ್ಟೆಯಲ್ಲಿ ನೋಂದಾಯಿತ ಬೆಳೆಗಾರರಿಂದ ಉತ್ಪಾದಿಸಲ್ಪಟ್ಟ ಹೆಚ್ಚುವರಿ ತಂಬಾಕು ಮಾರಾಟಕ್ಕೆ ಮತ್ತು
ನೋಂದಾಯಿಸದ ಬೆಳೆಗಾರರಿಂದ ಉತ್ಪಾದಿಸಲಾದ ಅನಧಿಕೃತ ತಂಬಾಕು ಮಾರಾಟ ಮಾಡಲು ಅವಕಾಶ ನೀಡಿದೆ ಎಂದು ಪ್ರಾದೇಶಿಕ ವ್ಯವಸ್ಥಾಪಕ ಎಂ ಲಕ್ಷ್ಮಣರಾವ್ ತಿಳಿಸಿದ್ದಾರೆ.

ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ನೋಂದಾಯಿತ
ಬೆಳೆಗಾರರು ಉತ್ಪಾದಿಸುವ ಹೆಚ್ಚುವರಿ ಫ್ಲೋ ಕೂರ್ಡ್ ವರ್ಜೀನಿಯಾ ತಂಬಾಕನ್ನು ಮತ್ತು
ನೋಂದಾಯಿಸದ ಬೆಳೆಗಾರರು ಉತ್ಪಾದಿಸುವ ಅನಧಿಕೃತ ಫ್ಲೋ ಕ್ಯೂರ್ಡ್ ವರ್ಜೀನಿಯಾ ತಂಬಾಕನ್ನು ಅನ್ವಯವಾಗುವ ಸೇವಾ ಶುಲ್ಕಗಳೊಂದಿಗೆ ತಂಬಾಕು ಮಂಡಳಿಯ ಹರಾಜು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಪರಿಗಣಿಸಿದ್ದಾರೆ. 2022-2023 ಸಾಲಿನಲ್ಲಿ ತಂಬಾಕು ಬೆಳೆ ಕಡಿಮೆ ಉತ್ಪಾದನೆಯನ್ನು ಪರಿಗಣಿಸಿ ಹೆಚ್ಚುವರಿ ಸೇವಾ ಶುಲ್ಕಗಳನ್ನು ಮನ್ನಾ
ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಈ ವರ್ಷದಲ್ಲಿ, 40,207 ರೈತರು 60,782 ಹೆಕ್ಟೇರ್ ಪ್ರದೇಶದಲ್ಲಿ ಎಫ್‌ಸಿವಿ
ತಂಬಾಕನ್ನು ಬೆಳೆದಿದ್ದು ಮತ್ತು ಬೆಳೆ ಸಮಯದಲ್ಲಿ ಅಂದರೆ ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ ನಿರಂತರ ಮಳೆಯ ದೃಷ್ಟಿಯಿಂದ ತಂಬಾಕು ಮಂಡಳಿಯು ನಿಗದಿಪಡಿಸಿದ 100
ಮಿಲಿಯನ್ ಕೆಜಿ ಬೆಳೆ ಗಾತ್ರಕ್ಕೆ ಹೋಲಿಸಿದರೆ 59.78 ಮಿಲಿಯನ್ ಕೆಜಿ ಬೆಳೆಯನ್ನು ಮಾತ್ರ
ಉತ್ಪಾದಿಸಲು ಸಮರ್ಥರಾಗಿದ್ದಾರೆ. ವಾಣಿಜ್ಯ ಸಚಿವರಿಂದ ನಿರ್ಧಾರವಾದ, ಶೂನ್ಯ ದಂಡದ
(ಅಥವಾ) ನೋಂದಾಯಿತ ಬೆಳೆಗಾರರಿಂದ ಉತ್ಪಾದಿಸುವ ಹೆಚ್ಚುವರಿ ತಂಬಾಕು ಮತ್ತು
ನೋಂದಾಯಿಸದ ಬೆಳೆಗಾರರಿಂದ ಅನಧಿಕೃತ ತಂಬಾಕು ಮಾರಾಟಕ್ಕೆ ಯಾವುದೇ
ದಂಡವನ್ನು ವಿಧಿಸುವುದಿಲ್ಲ. 

 ರೈತರಿಗೆ ಈ ವರ್ಷ ಕಡಿಮೆ ಉತ್ಪಾದನೆ ನಷ್ಟದಿಂದ ಹೊರಬರಲು ಉಪಯೋಗವಾಗಿದೆ. ತಂಬಾಕು ಮಂಡಳಿಯ ಪರಿಶ್ರಮದಿಂದ ಹೆಚ್ಚುವರಿ ಸೇವಾ ಶುಲ್ಕಗಳನ್ನು ಮನ್ನಾ ಮಾಡಲಾಗಿದೆ. ಈ ಪರಿಗಣನೆಯು ಎಫ್‌ಸಿ ತಂಬಾಕು ರೈತರಿಗೆ ಕಡಿಮೆ ಉತ್ಪಾದನೆಯಿಂದ ಉಂಟಾದ ಆರ್ಥಿಕ ಸಮಸ್ಯೆಗಳನ್ನು ನಿವಾರಿಸಲು ಸಹಾಯ
ಮಾಡುತ್ತದೆ. ಜತೆಗೆ ಬೆಳೆಗಾರರು ತಮ್ಮ ಜೀವನೋಪಾಯವನ್ನು ಮುಂದುವರಿಸಲು ಹೆಚ್ಚು ಅನುಕೂಲವಾಗಲಿದೆ  ಎಂದು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0 Comments