20ಎಆರ್‌ಕೆ1..
ಅರಕಲಗೂಡಿನಲ್ಲಿರಕಲಗೂಡು: ಅರಕಲಗೂಡು
ಅರಕಲಗೂಡು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 484 ಹಳ್ಳಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಮೂರು ಯೋಜನೆಗಳ ಶಂಕುಸ್ಥಾಪನಾ ಸಮಾರಂಭ ಜ. 22 ರಂದು ನಡೆಯಲಿದ್ದು ಅಗತ್ಯ ಸಿದ್ದತೆ ಕೈಗೊಳ್ಳಲಾಗಿದೆ ಎಂದು ಶಾಸಕ ಎ.ಟಿ. ರಾಮಸ್ವಾಮಿ ತಿಳಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಕಸಬಾ, ಮಲ್ಲಿಪಟ್ಟಣ, ದೊಡ್ಡಮಗ್ಗೆ, ಕೊಣನೂರು, ರಾಮನಾಥಪುರ ಹಾಗೂ ಹಳ್ಳಿಮೈಸೂರು ಹೋಬಳಿಯ ಬಹುತೇಕ ಹಳ್ಳಿಗಳಿಗೆ 406.24 ಕೋಟಿ ರೂ ವೆಚ್ಚದ ಈ ಯೋಜನೆಯಿಂದ ಕುಡಿಯುವ ನೀರಿನ ಸೌಲಭ್ಯ ದೊಯಲಿದೆ. ಜಲ ಜೀವನ್ ಮಿಷನ್ ಯೋಜನೆಯಡಿ ಮನೆ, ಮನೆಗೆ ಗಂಗೆ ಕಾರ್ಯಕ್ರಮದಲ್ಲಿ 284 ಕೋಟಿ ರೂ ವೆಚ್ಚದಲ್ಲಿ 410 ಗ್ರಾಮಗಳ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲಾಗುವುದು ಎಂದರು.
ಕಸಬಾ ಹೋಬಳಿ ಬೋಳಕ್ಯಾತನಹಳ್ಳಿ ಬಳಿ ಹೇಮಾವತಿ ನದಿಯಿಂದ ನೀರೆತ್ತುವ ಯೋಜನೆಯಿಂದ ಅರಕಲಗೂಡು ಹಾಗೂ ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರು ಹೋಬಳಿಯ 138 ಗ್ರಾಮಗಳಿಗೆ, ತಾಲ್ಲೂಕಿನ ಕೊಣನೂರು ಹೋಬಳಿ ಬಾನುಗುಂದಿ ಕಾವೇರಿ ನದಿ ಯಿಂದ 217.33 ಕೋಟಿ ರೂ ವೆಚ್ಚದ ಕಾಮಗಾರಿಯಿಂದ 260 ಗ್ರಾಮಗಳಿಗೆ ಹಾಗೂ ರಾಮನಾಥಪುರ ಹೋಬಳಿ ಆನಂದೂರು ಗ್ರಾಮದ ಬಳಿ ಕಾವೇರಿ ನದಿಯಿಂದ ರೂ 94.20 ಕೋಟಿ ವೆಚ್ಚದ ನೀರೆತ್ತುವ ಯೋಜನೆಯಿಂದ 84 ಗ್ರಾಮಗಳಿಗೆ ಕುಡಿಯುವ ನೀರಿನ ಪ್ರಯೋಜನ ದೊರಕಲಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸಭಾ ಸದಸ್ಯ ಎಚ್.ಡಿ.ದೇವೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, ಸಂಸದ ಪ್ರಜ್ವಲ್ ರೇವಣ್ಣ, ಪಾಲ್ಗೊಳ್ಳುವರು ಎಂದರು.
ತಾಲೂಕಿನಲ್ಲಿ ಕಳೆದ 5 ವರ್ಷಗಳಿಂದ ನಡೆದ ಅಭಿವೃದ್ಧಿ ಕಾಮಗಾರಿಗಳನ್ನು ಮೆಚ್ಚಿ ವಿವಿಧ ಮಠಾಧೀಶರು ಹಾಗೂ ಧರ್ಮ ಗುರುಗಳು ತಮಗೆ ಅಭಿನಂದನಾ ಕಾರ್ಯಕ್ರಮ ಆಯೋಜಿಸಿದ್ದು ಸ್ವಾಮಿಜಿಗಳ ಕೃಪೆಗೆ ಪಾತ್ರವಾಗುತ್ತಿರುವುದು ನನ್ನ ಸುಧೈವವಾಗಿದೆ, ಜನಸೇವೆ ಮಾಡಿದ ತೃಪ್ತಿ ಸಿಗುತ್ತಿದೆ ಎಂದರು.
0 Comments