ಮಗ್ಗೆ ಕುಟುಂಬಕ್ಕೆ ಎಚ್ಚರಿಕೆ ಗಂಟೆ ನೀಡಿ ಗುಡುಗಿದ ಶಾಸಕ; ಉಸಿರು ಬಿಟ್ರೆ ಕ್ರಷರ್ ಕಂಥಂ!!

ಅರಕಲಗೂಡು: ನಾನು ಉಸಿರು ಬಿಟ್ಟರೆ ಒಂದೇ ಬಾರಿಗೆ ಕ್ರಷರ್ ನಿಲ್ಲಿಸುವ ಶಕ್ತಿ ನನಗಿದೆ ಎನ್ನುವ ಮೂಲಕ ಮೊದಲ ಬಾರಿಗೆ ದೊಡ್ಡಮಗ್ಗೆ ರಂಗಸ್ವಾಮಿ ಕುಟುಂಬಕ್ಕೆ ಶಾಸಕ ಎ.ಟಿ. ರಾಮಸ್ವಾಮಿ ಪರೋಕ್ಷವಾಗಿ ಎಚ್ಚರಿಕೆ ಕೊಟ್ಟು ಗುಡುಗು ಹಾಕಿದರು.

ತಾಲೂಕಿನ ಅರಸೀಕಟ್ಟೆ ಅಮ್ಮನವರ ದೇವಾಲಯ ಸಭಾಂಗಣದಲ್ಲಿ  ನಡೆದ ಜೆಡಿಎಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಕೆಲವರು ಅಭಿವೃದ್ಧಿಯಲ್ಲಿ ಕ್ಷೇತ್ರ ಹಿಂದುಳಿದಿದೆ ಎಂಬ ಹೇಳಿಕೆ ನೀಡುತ್ತಿದ್ದು, ನನ್ನ ವಿರುದ್ದ ಮಾತನಾಡುತ್ತಿವುದನ್ನು ಸಹಿಸಿಕೊಂಡಿದ್ದೇನೆ. ಬೆರೆಯವರಿಗೆ ಆಗಬೇಕಿದ್ದ ಕ್ರಷರ್ ಅನ್ನು ನಾನೇ ಸ್ವತಃ ನನ್ನ ಕಾರಿನಲ್ಲಿ ಕೂರಿಸಿಕೊಂಡು ಹೋಗಿ ಮಾಡಿಸಿಕೊಟ್ಟಿರುವೆ. ಅಂತವರು ನನ್ನ ವಿರುದ್ಧ ಮಾತನಾಡುತ್ತಾರೆ. ಅಂತವರ ವಿರುದ್ಧ ಉಸಿರುಬಿಟ್ಟರೆ ಒಂದೇ ದಿನದಲ್ಲಿ ಅವರು ನಂಬಿಕೊAಡಿರುವ ಉದ್ಯಮ ನಿಲ್ಲಿಸುವ ಶಕ್ತಿ ನನಗಿದೆ ಎಂದು ಕಾಂಗ್ರೆಸ್ ಮುಖಂಡ ಎಂ.ಟಿ. ಕೃಷ್ಣೇಗೌಡ ವಿರುದ್ಧ ಪರೀಕ್ಷವಾಗಿ ಹರಿಹಾಯ್ದು ಎಚ್ಚರಿಕೆ ಗಂಟೆ ನೀಡಿದರು.

ಭ್ರಷ್ಟಾಚಾರದ ಹಣದಿಂದ ಕ್ಷೇತ್ರದಲ್ಲಿ ರಾಜಕೀಯ ಮಾಡಲು ಬಂದಿರುವವರು ನನ್ನ ಅವಧಿಯಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರಶ್ನಿಸುವ ನೈತಿಕತೆ ಇಲ್ಲ, ನಾನು ಉಸಿರು ಬಿಟ್ಟರೆ ಕ್ರಷರ್ ನಿಂತು ಹೋಗುತ್ತದೆ. ಯಾವ ರಾಜಕಾರಣಿ ಕ್ರಷರ್ ಅನ್ನು ಬೇರೆಯವರಿಗೆ ಕೊಡಿಸುತ್ತಾರೆ. ನಾನೇ ನನ್ನ ಕಾರಿನಲ್ಲಿ ಕೂರಿಸಿಕೊಂಡು ಹೋಗಿ ಮಾಡಿಸಿಕೊಟ್ಟೆ, ನಾನೇನು ಐದು ಪರ್ಸೆಂಟ್ ಕೊಡಿ ಎಂದು ಕೇಳಿದ್ದೆನಾ ಎಂದು ಗರಂ ಆದರು.

ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದು ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಮುಂದಿನ ಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಿದರು. 

ಜೆಡಿಎಸ್ ಮುಖಂಡರಾದ ಜನಾರ್ಧನ ಗುಪ್ತ, ಲೋಕನಾಥ್, ಸಂತೋಷ್‌ಗೌಡ, ಚೌಡೇಗೌಡ, ಪುಟ್ಟಸ್ವಾಮೋಪ್ಪ, ಸೋಮಶೇಖರ್, ಜಗದೀಶ್, ಗೋವಿಂದೇಗೌಡ ಹಾರಿದ್ದರು.

Post a Comment

0 Comments