ಮೋದಿ, ಅಮಿತ್ ಶಾ ಇಲ್ಲದ ಕಾಲದಲ್ಲೇ ಗೆದ್ದಿರುವೆ: ಎ. ಮಂಜು

ಅರಕಲಗೂಡು: ಮೋದಿ ಅಮಿತ್‌ ಶಾ ಇಲ್ಲದ ಕಾಲದಲ್ಲೇ ನಾನು ಚುನಾವಣೆಯಲ್ಲಿ ಗೆದ್ದಿರುವೆ, ಮತದಾರರಿಗೆ ನನ್ನ ಮೇಲೆ ವಿಶ್ವಾಸವಿದೆ ಎಂದು ಎ. ಮಂಜು ಹೇಳಿದರು.
ತಾಲೂಕಿನ ಹರದೂರಪುರ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು, ಕೆಲವರು ಆಕಸ್ಮಿವಾಗಿ ಶಾಸಕರಾಗಿದ್ದಾರೆ. ನಾನು ಜನಸೇವೆಗಾಗಿ ರಾಜಕಾರಣಕ್ಕೆ ಬಂದಿರೋದು, ನನ್ನ ಕಾಲದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳಾಗಿವೆ ಎಂದರು.

ಈ ಚುನಾವಣೆ ಮಂಜಣ್ಣನ ಚುನಾವಣೆಯಲ್ಲ. ಕಾರ್ಯಕರ್ತರು ಮತ್ತು ಹಿತೈಷಿಗಳ ಚುನಾವಣೆ. ಈ ಕ್ಷೇತ್ರದ ಜನರು ತಮ್ಮ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸಕ್ಕೆ ತಾವು ಸದಾ ಋಣಿಯಾಗಿರುವುದಾಗಿ ಹೇಳಿದರು.

ಕ್ಷೇತ್ರದ ಮತದಾರರೆ ನನ್ನ ಗಾಡ್ ಫಾದರ್, ಶಾಸಕ ಹಾಗೂ,ಮಂತ್ರಿಯಾಗಲು ನಿಮ್ಮ ಆಶೀರ್ವಾದವೆ ಕಾರಣ. ಇದೇ ನನ್ನ ಕೊನೆಯ ಚುನಾವಣೆಯಾಗಿದ್ದು ಜನತೆ ತಮ್ಮನ್ನು ಬೆಂಬಲಿಸುವಂತೆ ಮಾಜಿ ಸಚಿವ  ಎ ಮಂಜು ಮನವಿ ಮಾಡಿದರು.

Post a Comment

0 Comments