ಅರಕಲಗೂಡು: ನಾನು ಮಂಜೂರು ಮಾಡಿಸಿರೋ ಕೆಲಸಗಳಿಗೆ ಎ.ಟಿ. ರಾಮಸ್ವಾಮಿ ಗುದ್ದಲಿ ಪೂಜೆ ನಡೆಸುತ್ತಿದ್ದಾರೆ ಎಂದು ಮಾಜಿ ಸಚಿವ ಎ. ಮಂಜು ಲೇವಡಿ ಮಾಡಿದರು.
ತಾಲ್ಲೂಕಿನ ಹರದೂರು ರಂಗನಾಥ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಬಹಳಷ್ಟು ಜನರಲ್ಲಿ ನಾನು ಯಾವ ಪಕ್ಷ ಎಂಬ ಕುರಿತು ಗೊಂದಲವಿದೆ. ಈ ಕುರಿತು ತಲೆ ಕೆಡಿಸಿ ಕೊಳ್ಳಬೇಡಿ ನಾನು ಯಾವುದೇ ಪಕ್ಷದಲ್ಲಿದ್ದರೂ ಜನರ ಪರ. ಜನತೆ ಹಾಗೂ ಹಿತೈಷಿಗಳ ಸೂಚನೆಯಂತೆ ನಡೆಯುತ್ತೇನೆ ಜನರ ನಿರೀಕ್ಷೆಯಂತೆ ಎಲ್ಲವೂ ನಡೆಯಲಿದೆ, ನಿಮ್ಮ, ನಿಮ್ಮ ಊರುಗಳಲ್ಲಿ ನನ್ನ ಪರ ಪ್ರಚಾರ ಆರಂಭಿಸಿ, ರಾಜಕೀಯ ಕ್ಷೇತ್ರದಲ್ಲಿ ನನ್ನ ಸಾಧನೆಗೆ ಜನರ ಬೆಂಬಲವೆ ಕಾರಣವಾಗಿದ್ದು ನೀವೇ ಅಭ್ಯರ್ಥಿ ಎಂದು ಭಾವಿಸಿ ಸಣ್ಣ ಪುಟ್ಟಪರ ವಿರೋಧಗಳು ಇದ್ದಲ್ಲಿ ಅದನ್ನು ಸರಿಪಡಿಸಿ ಕೊಂಡು ಮುಂದುವರೆಯುವಂತೆ ಅಭಿಮಾನಿಗಳು ಮತ್ತು ಹಿತೈಷಿಗಳಲ್ಲಿ ಮನವಿ ಮಾಡಿದರು.
ಹಾಲಿ ಶಾಸಕರು ನಡೆಸುತ್ತಿರುವ ಬಹಳಷ್ಟು ಅಭಿವೃದ್ದಿ ಕಾಮಗಾರಿಗಳು ನನ್ನ ಅವಧಿಯಲ್ಲಿ ಮಂಜೂರಾಗಿ ಪ್ರಾರಂಭವಾದವುಗಳು, ಅದನ್ನು ಅವರು ಮುಂದುವರೆಸಿದ್ದಾರೆ ಅಷ್ಟೆ. ಇದೂ ಅವರಿಗೂ ಗೊತ್ತು, ಈ ಕುರಿತು ನೀವು ಮಾತನಾಡಬೇಕು ಎಂದರು.
0 Comments