ಅರಕಲಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್ ಸಮಿತಿ ಭೇಟಿ

ಅರಕಲಗೂಡು: ಇಲ್ಲಿನ  ಸರ್ಕಾರಿ  ಪ್ರಥಮ ದರ್ಜೆ ಕಾಲೇಜಿಗೆ ಗುರುವಾರ ನ್ಯಾಕ್ ಸಮಿತಿ ಭೇಟಿ ನೀಡಿ ಮೌಲ್ಯಾಂಕನ  ಕಾರ್ಯ ನಡೆಸಿತು. 

ಬೆಳಿಗ್ಗೆ ಕಾಲೇಜಿಗೆ ಬಂದ ಸಮಿತಿ  ಸದಸ್ಯರನ್ನು  ಕಾಲೇಜು ಅಭಿವೃದ್ದಿ ಸಮಿತಿ ಅಧ್ಯಕ್ಷ  ಎ.ಟಿ.ರಾಮಸ್ವಾಮಿ ಸ್ವಾಗತಿಸಿ ಕಳೆದ ಐದು ವರ್ಷಗಳಲ್ಲಿ ಕಾಲೇಜಿನ  ಅಭಿವೃದ್ದಿಗೆ ಕೈಗೊಂಡಿರುವ ಕ್ರಮಗಳ ಕುರಿತು ವಿವರಿಸಿದರು.

ಕಾಲೇಜಿನ ವಿವಿಧ ವಿಭಾಗಗಳ ಪ್ರಗತಿ, ಕಾಲೇಜಿನ ಕ್ಯಾಂಪಸ್, ಕಟ್ಟಡ ಹಾಗೂ  ವಿದ್ಯಾರ್ಥಿಗಳ  ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಪ್ರತಿಭೆಗಳ ಕುರಿತು ಸಮಿತಿಯ ಅಧ್ಯಕ್ಷ    ತಮಿಳುನಾಡು ಕರೈಕುಡಿಯ ಅಲಗಪ್ಪ  ವಿಶ್ವ ವಿದ್ಯಾಲಯದ ಮಾಜಿ ಉಪಕುಲಪತಿ  ಪ್ರೊ ಎನ್ ರಾಜೆಂದ್ರನ್, ಸದಸ್ಯರಾದ ಮಹಾರಾಷ್ಟ್ರದ ಔರಂಗಾಬಾದ್ ಅಂಬೇಡ್ಕರ್ ವಿಶ್ವ ವಿದ್ಯಾಲಯದ  ಪ್ರೊ  ಪ್ರಶಾಂತ್ ಎಸ್  ಅಮೃತ್ ಕರ್,  ದೆಹಲಿಯ ಶಾಹಿದದ್ ಸುಖದೇವ್ ವಿಶ್ವ ವಿದ್ಯಾಲಯದ  ಪೂನಮ್ ವರ್ಮಾ ಪರಿಶೀಲನೆ ನಡೆಸಿದರು.  

ಕಾಲೇಜಿನಲ್ಲಿ ತೆರೆದಿರುವ ಧ್ಯಾನ ಮಂದಿರದ ಬಗ್ಗೆ  ಸಮಿತಿ ಮೆಚ್ಚುಗೆ ವ್ಯಕ್ತ ಪಡಿಸಿತು. ಪ್ರಾಂಶುಪಾಲರಾದ  ಎಚ್.ಎಸ್. ಸ್ಮಿತಾ ಮತ್ತು ಪ್ರಾದ್ಯಾಪಕರು ಹಾಜರಿದ್ದು ಕಾಲೇಜಿನ ಕಾರ್ಯ ಚಟುವಟಿಹೆ ಕುರಿತು ಮಾಹಿತಿ ಒದಗಿಸಿದರು.

Post a Comment

0 Comments