ಅರಕಲಗೂಡು: ಅರಕಲಗೂಡು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಚ್.ಎನ್. ವಿಜಯ್ ಮುಂದಾಳತ್ವದಲ್ಲಿ ಅಪಾರ ಬೆಂಬಲಿಗರು ಬೈಕ್ ರ್ಯಾರಿ ನಡೆಸಿ ಗಮನ ಸೆಳೆದರು.
ಪಟ್ಟಣದ ಅನಕೃ ವೃತ್ತದಲದಲ್ಲಿ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಆತ್ಮೀಯವಾಗಿ ಸ್ವಾಗತಿಸಿದರು. ವಿಜಯ್ ಕುಮಾರ್ ಅವರು ಅರಕಲಗೂಡು ವಿಧಾನಸಭಾ ಸಭಾ ಕ್ಷೇತ್ರದ ಟಿಕೆಟ್ ಗೆ ಅರ್ಜಿ ಸಲ್ಲಿಸಿದ್ದು, ಇದೇ ಮೊದಲಬಾರಿಗೆ ಬೈಕ್ ರ್ಯಾಲಿ ಮೂಲಕ ಅರಕಲಗೂಡಿಗೆ ಆಗಮಿಸಿದ ವಿಜಯ್ ಕುಮಾರ್ ಅವರನ್ನು ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಹೂವಿನ ಹಾರ ಹಾಕಿ ಆತ್ಮೀಯವಾಗಿ ಸ್ವಾಗತಿಸಿದರು.
ಬಳಿಕ ಕುಟುಂಬದೊಂದಿಗೆ ನಡಿಗೆಯಲ್ಲೇ ತೆರಳಿ ಶ್ರೀ ದೊಡ್ಡಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಮಾಧ್ಯಮದೊಂದಿಗೆ ವಿಜಯ್ ಕುಮಾರ್ ಅವರು ಮಾತನಾಡಿ, ರಾಜ್ಯ, ರಾಷ್ಟೀಯ ನಾಯಕರ ಸಲಹೆ ಮೇರೆಗೆ ಅರಕಲಗೂಡು ವಿಧಾನ ಸಭಾ ಕ್ಷೇತ್ರದ ಟಿಕೆಟ್ ಗಾಗಿ ಅರ್ಜಿ ಹಾಕಿದ್ದು, ತಾಲೂಕನ್ನು ಮಾದರಿ ತಾಲೂಕಾಗಿ ಮಾಡಬೇಕೆಂಬ ಕನಸನ್ನು ಕಟ್ಟಿಕೊಂಡಿದ್ದೇನೆ. ಅವಕಾಶ ಸಿಕ್ಕಿದರೆ ಖಂಡಿತ ಮಾಡುತ್ತಾನೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು ಎಂದು ಮನವಿ ಮಾಡಿದರು.
ನಾನು ಪಕ್ಕದ ತಾಲೂಕು ಹರದನಹಳ್ಳಿಯವನು. ಆದರೆ ಕಳೆದ 25 ವರ್ಷದಿಂದ ತಾಲೂಕಿನ ಜನರೊಂದಿಗೆ ಒಡನಾಟ ಹೊಂದಿದ್ದು, ಸಣ್ಣ ಪುಟ್ಟ ಸಮಾಜ ಸೇವೆಗಳನ್ನು ಮಾಡಿಕೊಂಡು ಬಂದಿದ್ದೇನೆ. ಬಸವಾಪಟ್ಟಣದಲ್ಲಿ ಮನೆ, ತೋಟವಿದೆ. ಪಕ್ಷ ಟಿಕೆಟ್ ನೀಡಿದರೂ, ನೀಡದಿದ್ದರೂ ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ. ಯಾರಿಗೆ ಟಿಕೆಟ್ ನೀಡಿದರೂ ಅವರೊಂದಿಗೆ ಕೆಲಸ ಮಾಡುತ್ತೇನೆ ಎಂದರು.
ಮತ್ತೊರ್ವ ಟಿಕೆಟ್ ಆಕಾಂಕ್ಷಿ ಕೃಷ್ಣೆಗೌಡ ಮಾತನಾಡಿ, ಅರಕಲಗೂಡು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ನಿಂದ 5 ಮಂದಿ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದು, ಯಾರಿಗೆ ಟಿಕೆಟ್ ಸಿಗುತ್ತದೋ ಅವರಿಗೆ ಬೆಂಬಲ ನೀಡುತ್ತೇವೆ. ಎಲ್ಲರೂ ಪಕ್ಷವನ್ನು ಬಲಪಡಿಸುತ್ತೇವೆ ಎಂದರು.
ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ವಿಜಯ್ ಕುಮಾರ್ ಅವರು ಮಾತನಾಡಿ, 25 ವರ್ಷದ ಹಿಂದೆ ಅಡಿಕೆ ವ್ಯಾಪಾರಕ್ಕೆ ಬಂದ ನಾನು ತಾಲೂಕಿನ ಜನರೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದೇನೆ ಎಂದರು.
ಪಕ್ಕದ ತಾಲೂಕಿನವರು ಇಲ್ಲಿಗೆ ಬಂದಿದ್ದಾರೆ ಎಂದು ಅನಿಸಬಹುದು. ಹಾಗೆ ತಿಳಿಯಬೇಕಿಲ್ಲ. ಬಸವಾಪಟ್ಟಣದಲ್ಲಿ ತೋಟ, ಮನೆಯಿದೆ. ರಾಜಕೀಯದಲ್ಲಿದ್ದೆ ಜನ ಸೇವೆ ಮಾಡಬೇಕೆಂದೇನಿಲ್ಲ. ವ್ಯವಹಾರಿಕವಾಗಿರುವವರು ಅದಕ್ಕಿಂತ 10 ಪಟ್ಟು ಕೆಲಸ ಮಾಡಬಹುದು. ಆದರೆ ರಾಜಕೀಯವಾಗಿ ಮಾಡಬೇಕಿರುವ ಕೆಲಸ ತುಂಬಾ ಇದೆ. ವ್ಯವಹಾರಿಕವಾಗಿ ಎಷ್ಟೇ ಕೆಲಸ ಮಾಡಿದರೂ ಕಂಡು ಬರುವುದಿಲ್ಲ. ಅದೇ ರಾಜಕೀಯವಾಗಿ ಸಣ್ಣ ಕೆಲಸ ಮಾಡಿದರೂ ಮುಂದಿನ 10 ವರ್ಷ ನೆನಪಿನಲ್ಲಿ ಇರುತ್ತದೆ. ಹಾಗಾಗಿ ಅರ್ಜಿ ಹಾಕಿದ್ದೇನೆ. ತಾಲೂಕಲ್ಲಿ 5 ಮಂದಿ ಅರ್ಜಿ ಹಾಕಿದ್ದು, ಹೈ ಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತದೋ ಅವರಿಗೆ ಸಹಕಾರ ನೀಡುತ್ತೇವೆ ಎಂದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ, ಪಟ್ಟಣ ಪಂಚಾಯತಿ ಮಾಜಿ ಉಪಾಧ್ಯಕ್ಷ ವೆಂಕಟೇಶ್, ಮಂಡ್ಯ ಹಿಂದುಳಿದ ವರ್ಗದ ಮುಖಂಡರಾದ ನಾಗರತ್ನ, ರವಿ, ಗಣೇಶ್, ಪಕ್ಷದ ಮುಖಂಡರು ಉಪಸ್ಥಿತರಿದ್ದರು.
0 Comments