ಅರಕಲಗೂಡು ಅಭಿವೃದ್ಧಿಗೆ ಬಿಜೆಪಿ ಬೆಂಬಲಿಸಿ ಯೋಗಾ ರಮೇಶ್ ಗೆಲ್ಲಿಸಿ; ಸಚಿವ ಕೆ. ಗೋಪಾಲಯ್ಯ ಮನವಿ

ಅರಕಲಗೂಡು: ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳಲ್ಲಿ ಗೆಲುವು ಸಾಧಿಸುವುದು ಖಚಿತವಾಗಿದ್ದು ಕ್ಷೇತ್ರದಲ್ಲಿಯೂ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಮನವಿ ಮಾಡಿದರು.

ತಾಲೂಕಿನ ಹೊನ್ನವಳ್ಳಿ ಡಿ.ಕೆ.ಕನ್ವೆನ್ಷನ್ ಹಾಲ್‌ನಲ್ಲಿ ಸೋಮವಾರ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಯಾವುದೇ ಕ್ಷೇತ್ರಗಳಿಗೆ ಅಭಿವೃದ್ಧಿ ಕಾರ್ಯದಲ್ಲಿ ತಾರತಮ್ಯ ಮಾಡದೆ ಅಪಾರ ಅನುದಾನ ಒದಗಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜಿಲ್ಲೆಯ 2.60 ಲಕ್ಷ ರೈತರ ಖಾತೆಗೆ ನೇರವಾಗಿ 10 ಸಾವಿರ ಹಣ ಜಮಾ ಮಾಡಿದೆ. ನೀರಾವರಿ ಯೋಜನೆಗಳ ಅನುಷ್ಠಾನ ಸೇರಿದಂತೆ ರಸ್ತೆ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಕಾಡಾನೆಗಳ ಸಮಸ್ಯೆಯಿಂದ ರೈತರಿಗೆ ಆಗಿರುವ ನಷ್ಟ ಭರಿಸಿದ. ಪರಿಹಾರದ ಮೊತ್ತವನ್ನು ಏರಿಕೆ ಮಾಡಲಾಗಿದೆ. 
ಬೇಲೂರು, ಸಕಲೇಶಪುರ, ಆಲೂರು, ಅರಕಲಗೂಡು ಭಾಗದಲ್ಲಿ ಆನೆಗಳ ಹಾವಳಿ ತಡೆಗಟ್ಟಲು ಕೊಡಗಿನ ಕಟ್ಟೇಪುರ ಮತ್ತು ಮೂಡಿಗೆರೆಯಲ್ಲಿ ಆನೆ ಕಾರಿಡಾರ್ ಸ್ಥಾಪಿಸಲಾಗುವುದು. ರೆಡಿಯೋ ಕಾಲರ್ ಹಾಗೂ ರೈಲ್ವೆ ಕಂಬಿ ಸ್ಥಾಪಿಸಲಾಗಿದೆ. ಸರ್ಕಾರ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಹಿಂದೆ ಬಿಳದೇ ಜನಪರವಾಗಿ ಕೆಲಸ ನಿರ್ವಹಿಸಲಾಗಿದ್ದು ಪ್ರಗತಿ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.

ರಾಜ್ಯದಲ್ಲಿ ಮುಂದೆಯೂ ಬಿಜೆಪಿ ಪಕ್ಷವೇ ಅಧಿಕಾರಕ್ಕೆ ಬರಲಿದೆ. ಕಳೆದ 1999ರಲ್ಲಿ ಮೊದಲ ಬಾರಿಗೆ ಅರಕಲಗೂಡಿನಲ್ಲಿ ಬಿಜೆಪಿ ಅಭ್ಯರ್ಥಿ ಆಯ್ಕೆ ಮಾಡಲಾಗಿತ್ತು. ಕ್ಷೇತ್ರದ ಸರ್ವಾಂಗೀಣ ಭಿವೃದ್ಧಿಗಾಗಿ ಮತದಾರರು ಮುಂದಿನ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಆಶೀರ್ವಾದ ಮಾಡಬೇಕು ಎಂದು ವಿನಂತಿಸಿದರು.

ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಎಚ್. ಯೋಗಾರಮೇಶ್ ಮಾತನಾಡಿ, ಕಳೆದ ಮುವತ್ತೈದು ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿಯನ್ನು ನಿರ್ಲಕ್ಷ್ಯಿಸಿರುವ ಹಾಲಿ ಮತ್ತು ಮಾಜಿ ಶಾಸಕರಿಗೆ ಮತದಾರರು ಪ್ರತಿ ಚುನಾವಣೆಯಲ್ಲಿ ಮಣೆ ಹಾಕುತ್ತಾ ಬಂದಿದ್ದಾರೆ. ಆದರೆ ಅಧಿಕಾರ ಅನುಭವಿಸಿದ ರಾಜಕಾರಣಿಗಳು ಏನೊಂದು ಶಾಶ್ವತವಾದ ಪ್ರಗತಿ ಕಾರ್ಯಗಳನ್ನು ಕೈಗೊಳ್ಳದೆ ಎಲ್ಲ ಕ್ಷೇತ್ರಗಳಲ್ಲೂ ಹಿಂದುಳಿದುದ್ದು ತಾಲೂಕು ಅಭಿವೃದ್ಧಿಯಿಂದ ವಂಚಿತವಾಗಿದೆ.

ಚುನಾವಣೆಯಲ್ಲಿ ಇವರ ಪರ ಮತ ಕೇಳಲು ಬರುವ ಆ ಪಕ್ಷಗಳ ರಾಜ್ಯದ ನಾಯಕರು ಅಭಿವೃದ್ಧಿ ಕಾರ್ಯಗಳಿಗೆ ಸ್ಪಂದಿಸಿದ ಉದಾಹರಣೆ ಇಲ್ಲ. ಜೆಡಿಎಸ್ ಅಧಿಕಾರದಲ್ಲಿ ಇದ್ದಾಗ ಎಲ್ಲ ಅನುದಾನವನ್ನು ಹೊಳೆನರಸೀಪುರಕ್ಕೆ ಕೊಂಡೊಯ್ದು ಅರಕಲಗೂಡಿನ ಬಗ್ಗೆ ಮಲತಾಯಿ ಧೋರಣೆ ಎಸಗಲಾಯಿದೆ. ಕಳೆದ ಬಾರಿ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದ್ದರೆ ಬಿಜೆಪಿ ಸರ್ಕಾರದಲ್ಲಿ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತಿತ್ತು. ಈಗ ಏನಿದ್ದರೂ ಬಿಜೆಪಿ ಯುಗ, ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯ ಸರ್ಕಾರ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಆದ್ಯತೆ ನೀಡಿದೆ. ತಾಲೂಕಿಗೂ ತಾರತಮ್ಯ ಮಾಡಿಲ್ಲ. ಮುಂದೆಯೂ ಬಿಜೆಪಿ ಅಧಿಕಾರಕ್ಕೆ ಬರಲಿದ್ದು ಚುನಾವಣೆಯಲ್ಲಿ ನನಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಕೆ. ಸುರೇಶ್ ಮಾತನಾಡಿ, ಜನಸೇವೆಗಾಗಿ ಸರ್ಕಾರಿ ಕೆಲಸಕ್ಕೆ ರಾಜಿನಾಮೆ ಸಲ್ಲಿಸಿ ಪೊಟ್ಯಾಟೋ ಕ್ಲಬ್ ಮೂಲಕ ರೈತರ ಪರ ಕೆಲಸ ಮಾಡುತ್ತಿರುವ ಯೋಗಾ ರಮೇಶ್ ಅವರಿಗೆ ಚುನಾವಣೆಯಲ್ಲಿ ಮತದಾರರು ಈ ಬಾರಿಯದರೂ ಗೆಲ್ಲಿಸಬೇಕು ಎಂದರು.

ಮುಖಂಡರಾದ ಮೈ.ವಿ. ರವಿಶಂಕರ್, ವಿಶ್ವನಾಥ್, ಪಿ.ಟಿ. ಕೇಶವೇಗೌಡ, ಚಂದ್ರಶೇಖರ್, ಶಿವಲಿಂಗಶಾಸ್ತಿç, ನಳಿನಿ ಅರಸ್, ಲೋಕೇಶ್, ರಾಮಣ್ಣ, ವಕೀಲರಾದ ಎಂ.ಟಿ. ಸತ್ಯನಾರಾಯಣ, ಬಿ.ಸಿ. ರಾಜೇಶ್ ಇತರರಿದ್ದರು.

Post a Comment

0 Comments