ಗುಜರಾತ್ ಬಿಜೆಪಿ ಜಯಭೇರಿ: ಕಾರ್ಯಕರ್ತರ ಸಂಭ್ರಮಾಚರಣೆ

ಅರಕಲಗೂಡು: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಪಕ್ಷದ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಎಚ್. ಯೋಗಾರಮೇಶ್ ನೇತೃತ್ವದಲ್ಲಿ ದೊಡ್ಡಮ್ಮ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಪರ ಜೈಕಾರ ಕೂಗಿ ಸಿಹಿ ಹಂಚಿ ಸಂಭ್ರಮಾಚರಿಸಿದರು.
ಯೋಗಾರಮೇಶ್ ಮಾತನಾಡಿ, ಗುಜರಾತಿನಲ್ಲಿ ಬಿಜೆಪಿ‌ ಏಳನೇ ಬಾರಿಗೆ ಗೆಲುವು ಸಾಧಿಸುವ ಮುಖೇನ ಮುಖ್ಯಮಂತ್ರಿಯಾಗುವ ಕನಸು ಕಂಡಿದ್ದ ಕಾಂಗ್ರೆಸ್ ನ ಹಗಲು ಕನಸನ್ನು ಮತದಾರರು ಹುಸಿಗೊಳಿಸಿದ್ದಾರೆ. 

ರಾಜ್ಯದಲ್ಲಿಯೂ ಇದೇ ರೀತಿ ಮುಂದಿನ ಚುನವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದ್ದು ಕಾಂಗ್ರೆಸ್ ಕನಸು‌ ಭಗ್ನವಾಗಲಿದೆ ಎಂದರು.
ಭಾರತದ ರಾಜಕಾರಣ ಎಂದರಡ ಬಿಜೆಪಿ ಮತ್ತು ಮೋದಿಮಯವಾಗುತ್ತಿದೆ. ಒಂದು ಸುರಕ್ಷಿತ ಕ್ಷೇತ್ರ ಹುಡುಕಿಕೊಂಡು ಚುನಾವಣೆಯಲ್ಲಿ ಗೆಲ್ಲಲಾಗದ ಸಿದ್ದರಾಮಯ್ಯ ಅವರು ಬಿಜೆಪಿ ಬಗ್ಗೆ ಹಗುರವಾಗಿ ಮಾತನಾಡುತ್ತಿರುವುದಕ್ಕೆ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ಮುಖಂಡರಾದ ಎಸ್.ಪಿ. ಜಯಪ್ಪ, ಬಿ.ಸಿ. ರಾಜೇಶ್, ಚಂದು ಮುಂತಾದವರು ಪಾಲ್ಗೊಂಡಿದ್ದರು.

Post a Comment

0 Comments