ಅರಕಲಗೂಡು: ಹಾಸನಾಂಭ ಸಾಂಸ್ಕೃತಿಕ ಕಲಾವಿದರ ಸಂಘದ ತಾಲ್ಲೂಕು ಘಟಕವು ಚಿತ್ರ ನಟ ದಿ. ಡಾ ವಿಷ್ಣುವರ್ಧನ್ ಅವರ 13ನೇ ಪುಣ್ಯ ಸ್ಮರಣೆ ಅಂಗವಾಗಿ ಅರಕಲಗೂಡು ಸ್ಟಾರ್ ಸಿಂಗರ್ ಗಾಯನ ಸ್ಪರ್ಧೆಯನ್ನು ಡಿ 29 ರಂದು ಏರ್ಪಡಿಸಿದೆ ಎಂದು ಅಧ್ಯಕ್ಷ ಕೆ. ಮಹೇಶ್ ತಿಳಿಸಿದರು.
ಪಟ್ಟಣದ ಶಿಕ್ಷಕರ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಿರಿಯರ ಮತ್ತು ಕಿರಿಯರಿಗೆ ಸ್ಫರ್ಧೆ ನಡೆಯಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸ್ಫರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ ರೂ 5 ಸಾವಿರ, ಎರಡನೇ ಬಹುಮಾನ ರೂ 3 ಸಾವಿರ, ಮೂರನೇ ಬಹುಮಾನ ರೂ 2 ಸಾವಿರ ಹಾಗೂ ನಾಲ್ಕು ಮತ್ತು ಐದನೇ ಸ್ಥಾನಗಳಿಗೆ ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು.
ಡಿ 30 ರಂದು ಗಣಪತಿ ಕೊತ್ತಲು ಉದ್ಯಾನದಲ್ಲಿ ಸಾಮೂಹಿಕ ಅನ್ನಸಂತರ್ಪಣೆ ಹಾಗೂ ಬಹುಮಾನ ವಿತರಣೆ ನಡೆಸಲಾಗುವುದು. ಭಾಗವಹಿಸುವ ಸ್ಫರ್ಧಿಗಳು ಮೊ 9611597076 ಇಲ್ಲಿ ಸಂಪರ್ಕಿಸುವಂತೆ ಕೋರಿದರು.
ಸಂಘದ ಕಾರ್ಯಾಧ್ಯಕ್ಷ ಶೇಖರ್, ಉಪಾಧ್ಯಕ್ಷ ವರುಣ್, ಕಾರ್ಯದರ್ಶಿ ಗಂಗಾಧರ್ ಗೋಷ್ಠಿಯಲ್ಲಿದ್ದರು.
0 Comments