ಜ.೧ರಂದು ಭೀಮಾ ಕೋರೆಗಾಂವ್ ವಿಜಯ ದಿವಸ್ ಆಚರಣೆ

ಅರಕಲಗೂಡು:  ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವತಿಯಂದ ಭೀಮಾ ಕೋರೆಗಾಂವ್  ವಿಜಯ  ದಿವಸವನ್ನು ಜ 1 ರಂದು ಪಟ್ಟಣದಲ್ಲಿ  ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸಮಿತಿ ಸದಸ್ಯ ಈರೇಶ್ ಹಿರೇಹಳ್ಳಿ  ತಿಳಿಸಿದರು. 

1818 ರಲ್ಲಿ ನಡೆದ ಭೀಮಾ ಕೋರೆಗಾಂವ್ ಕದನ  ಅಸ್ಪೃಶ್ಯರ ಮೊದಲ ಸ್ವಾತಂತ್ರ್ಯ ಹೋರಾಟ ಎಂದೇ ಪರಿಗಣಿತವಾಗಿದೆ. 500 ಮಂದಿ ಮಹಾ ಸೈನಿಕರು  ತಮ್ಮ ಅಪ್ರತಿಮ ಹೋರಾಟದಿಂದ ಬೃಹತ್ ಸಂಖ್ಯೆಯ ಪೇಶ್ವೆ ಸೈನ್ಯವನ್ನು ಸೋಲಿಸಿದ್ದು ಚರಿತ್ರಾರ್ಹವೆನಿಸಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.  ಯುದ್ದ ದಲ್ಲಿ ಮಡಿದ ಮಹಾ ಸೈನಿಕರ ನೆನಪಿಗಾಗಿ ನಿರ್ಮಿಸಿದ್ದ ಮಹಾ ಸ್ತೂಪವನ್ನು ಮುಚ್ಚಿಹಾಕಲಾಗಿತ್ತು.  ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅಧ್ಯಯನ ನಡೆಸಿ ಇದನ್ನು  ಬೆಳಕಿಗೆ ತಂದರಲ್ಲದೆ, ತಾವು ಬದುಕಿರುವವರೆಗೂ ಪ್ರತಿ ವರ್ಷ ಜ 1ರಂದು ಇಲ್ಲಿಗೆ ಭೇಟಿ ನೀಡಿ ಗೌರವ ಸಲ್ಲಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಕೋರೆಗಾಂವ್ ವಿಜಯೋತ್ಸವವನ್ನು ದಸಂಸ ಆಚರಿಸಿಕೊಂಡು ಬರುತ್ತಿದೆ ಎಂದರು. 

ಪಟ್ಟಣದ ಬನ್ನಿ ಮಂಟಪದ ಬಳಿ ಸಂಜೆ 5 ಗಂಟೆಗೆ ಶಾಸಕ  ಎ.ಟಿ.ರಾಮಸ್ವಾಮಿ  ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಪ್ರಮುಖ ಬೀದಿಗಳಲ್ಲಿ ಕಾರ್ಯಕರ್ತರು ಮೆರವಣಿಗೆಯಲ್ಲಿ ಸಾಗಿ ತಾಲ್ಲೂಕು ಕಚೇರಿ ಆವರಣದಲ್ಲಿರುವ  ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗುವುದು.  ಪ್ರಾಧ್ಯಾಪಕರಾದ ಅತ್ನಿ ಕೃಷ್ಣ,  ಅತ್ನಿ ಮಹದೇವ್,  ಬಸವರಾಜ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಢಲಿದ್ದಾರೆ ಎಂದು  ಮಾಹಿತಿ ನೀಡಿದರು. 

ದಸಂಸ ತಾಲ್ಲೂಕು ಸಂಚಾಲಕ ದುಮ್ಮಿ ಕೃಷ್ಣ,  ಸಂಘಟನಾ ಸಂಚಾಲಕರಂಗಸ್ವಾಮಿ, ಹೋಬಳಿ ಸಂಚಾಲಕ ವೀರಭದ್ರ 

Post a Comment

0 Comments