ಹಾಲಿ ಮತ್ತು ಮಾಜಿ ಶಾಸಕರು ಮತದಾರರನ್ನು ಮರಳು ಮಾಡುವುದನ್ನು ನಿಲ್ಲಿಸಲು ಬಿಜೆಪಿ ಒತ್ತಾಯ

ಅರಕಲಗೂಡು: ತಾಲ್ಲೂಕಿನಲ್ಲಿ ಹಾಲಿ ಮತ್ತು ಮಾಜಿ ಶಾಸಕರು  ರಾಜಕೀಯ ಗೊಂದಲ ಸೃಷ್ಟಿಸಿ ಮತದಾರರನ್ನು  ಮರಳು ಮಾಡಲು ಯತ್ನಿಸುತ್ತಿದ್ದು  ಇಬ್ಬರೂ  ಮುಂಖಂಡರೂ  ತಮ್ಮ ರಾಜಕೀಯ ನಿಲುವುಗಳ ಕುರಿತು ಮತದಾರರಿಗೆ ಸ್ಪಷ್ಠತೆ ನೀಡುವಂತೆ ಬಿಜೆಪಿ ಮುಖಂಡ  ಎಚ್. ಯೋಗಾರಮೇಶ್ ಆಗ್ರಹಿಸಿದರು. 

 ಮಾಜಿ ಸಚಿವ   ಎ. ಮಂಜು  ಬಿಜೆಪಿಯಿಂದ ಶಾಸಕರಾಗಿ ನಂತರ ಕಾಂಗ್ರಸ್  ಸೇರಿ ಶಾಸಕ, ಸಚಿವರಾಗಿದ್ದರು.  ಎರಡು ಬಾರಿ ಲೋಕಸಭೆಗೆ  ಬೇರೆ, ಬೇರೆ ಪಕ್ಷಗಳಿಂದ  ಸ್ಫರ್ಧಿಸಿದ್ದರು. ಈಗ  ತಾವು ಜನರ ಪಕ್ಷ  ಎಂದು ಹೇಳುತ್ತಿದ್ದಾರೆ. ಶಾಸಕ, ಮಂತ್ರಿಯಾಗಿದ್ದಾಗ ನೆನಪಿಗೆ ಬರದ ಜನರು ಈಗ ಹೇಗೆ ನೆನಪಾಗುತ್ತಿದ್ದಾರೆ ಎಂದು ಬುಧವಾರ ಸುದ್ದಿ ಗೋಷ್ಠಿಯಲ್ಲಿ ಪ್ರಶ್ನಿಸಿದರು.  ನಾನು ಬಿಜೆಪಿಯಿಂದ ಗೆದ್ದಾಗ ಮೋದಿ, ಅಮಿತ್ ಷಾ ಇರಲಿಲ್ಲ ಎಂದಿದ್ದಾರೆ. ಗುಜಾರಾತ್ ನಲ್ಲಿ ಸತತವಾಗಿ ಏಳು ಬಾರಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ  ನಾಯಕರು. ಇವರ ಕುರಿತು ಲಘುವಾಗಿ ಮಾತನಾಡಲು ಮಂಜು ಅವರಿಗೆ   ಅರ್ಹತೆ ಇಲ್ಲ.   ಇವರಿಗೆ  ಎಲ್ಲ ಪಕ್ಷಗಳ ಬಾಗಿಲು ಮುಚ್ಚಿದೆ.  ಈಗ  ಇವರಿಗೆ ಜನರ ನೆನಪಾಗುತ್ತಿದ್ದಾರೆ. ಜನ ಸ್ಪಂದನಾ ಕಚೇರಿ ತೆರೆದಿರುವ  ಇವರು ಅಧಿಕಾರದಲ್ಲಿ ಇದ್ದಾಗೆ ಜನರ ಕಷ್ಟಕ್ಕೆ ಏಕೆ ಸ್ಪಂದಿಸಲಿಲ್ಲ. ಇವರ ರಾಜಕೀಯ ಜೀವನ ಕೊನೆಯ ಹಂತ ತಲುಪಿದೆ, ಜನರನ್ನು ಮರಳು ಮಾಡಿ ಮತ್ತೆ ಅಧಿಕಾರಕ್ಕೆ ಬರಲು ಹೊಸ  ವಿಧಾನಗಳನ್ನು ಅನುಸರಿಸುತ್ತಿದ್ದಾರೆ, ಜನರ ನೀರೀಕ್ಷೆಗೆ ತಕ್ಕಂತೆ ಕಾರ್ಯ ನಿರ್ವಹಿಸದ ಕಾರಣ ಜನರು ನಿಮ್ಮನ್ನು ತಿರಸ್ಕರಿಸಿದ್ದಾರೆ.  ಒಂದೊಂದು ಕಡೆ ಒಂದೊಂದು ರೀತಿ ಹೇಳುವುದನ್ನು ಬಿಟ್ಟು ನಿಮ್ಮ ರಾಜಕೀಯ ನಿಲುವಿನ ಕುರಿತು ಜನತೆಯ ಮುಂದೆ ಸ್ಪಷ್ಟತೆ ನೀಡಿ ಎಂದು ಆಗ್ರಹಿಸಿದರು. 

 ಹಾಲಿ ಶಾಸಕ   ಎ.ಟಿ.ರಾಮಸ್ವಾಮಿಯವರ ಮನೆಗೆ ಜೆಡಿಎಸ್ ವರಿಷ್ಟ  ಎಚ್.ಡಿ.ರೇವಣ್ಣ  ಭೇಟಿ ಕುರಿತು ಹಲವು  ಕುತೂಹಲಕ್ಕೆ ಕಾರಣವಾಗಿದೆ. ಈ ಕುರಿತು ಶಾಸಕರಾಗಲಿ, ವರಿಷ್ಠರಾಗಲಿ ಜನರಿಗೆ  ಉತ್ತರಿಸಿಲ್ಲ. ರೇವಣ್ಣ ಭೇಟಿ ರಾಜಕೀಯ ಚರ್ಚಿಸಲು ಎಂಬುದು ಎಲ್ಲರಿಗೂ  ತಿಳಿದಿದೆ. ಅಭಿವೃದ್ದಿಪರ ನಾನು  ಇರುತ್ತೇನೆ ಎನ್ನುವ ರಾಮಸ್ವಾಮಿಯವರು  ತಮ್ಮ ಆಡಳಿತ ವೈಫಲ್ಯವನ್ನು ಮುಚ್ಚಿಕೊಳ್ಳಲು ಹಾಗೂ ಪಕ್ಷದ ಮುಖಂಡರ  ಭಿನ್ನಮತ  ಎದುರಿಸಲಾರದೆ  ಗೊಂದಲ ಹುಟ್ಟು ಹಾಕುತ್ತಿದ್ದಾರೆ. ಅಭಿವೃದ್ದಿ ಪರ  ಇರುವುದು ನಿಜವೇ ಆದಲ್ಲಿ ನಿಮಗೆ ಅವಕಾಶ ನೀಡಿದ ಪಕ್ಷ ಜೆಡಿಎಸ್ ನಲ್ಲಿ ಇರಬೇಕು. ಆದರೆ ನೀವು ನಿಮ್ಮ ಪಕ್ಷದ ಸಭೆಗಳಲ್ಲೆ ಭಾಗವಹಿಸಲಿಲ್ಲ. ಯಾವುದೆ ವ್ಯಕ್ತಿ ತಮಗೆ ಅವಕಾಶ ನೀಡಿದ ಪಕ್ಷಕ್ಕೆ ನಿಷ್ಟನಾಗಿರಬೇಕು. 1989 ರಿಂದಲೂ ಈ ಇಬ್ಬರೂ ಹೊಂದಾಣಿಕೆ ರಾಜಕಾರಣದ  ಕಣ್ಣು ಮುಚ್ಚಾಲೆ ಆಠ ನಡೆಸಿದ್ದರು. ತಾವು ರಾಜಕಾರಣಕ್ಕೆ ಬಂದ ಬಳಕವಷ್ಟೆ  ಇವರ ಬಣ್ಣ ಬಯಲು ಮಾಡಿ ಇದಕ್ಕೆ ತೆರೆ ಎಳೆಯುವಂತೆ ಮಾಡಿದ್ದಾಗಿ ಹೇಳಿದರು. 

ಇಬ್ಬರೂ ನಾಯಕರು ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು  ರಾಜಕೀಯ ಗೊಂದಲ ಸೃಷ್ಟಿಸುತ್ತಿದ್ದಾರೆ. ನಿಮ್ಮ ಸ್ವಾರ್ಥ ನತಾಜಕಾರಣಕ್ಕೆ ಅರಕಲಗೂಡು ಕ್ಷೇತ್ರ  ರಾಜಕೀಯವಾಗಿ ಗೊಂದಲದ ಗೂಡಾಗಿದೆ. ಇಂತಹ ಗೊಂದಲದಿಂದ ಯಾವುದೇ  ರಾಜಕೀಯ ಉಪ ಯೋಗವಿದೆ ಎಂಬುದು ನಿಮ್ಮ ತಪ್ಪು ತಿಳುವಳಿಕೆಯಾಗಿದೆ. ತಮ್ಮ ರಾಜಕೀಯ ನಿಲುವುಗಳನ್ನು  ಜನರ ಮುಂದೆ ಸ್ಪಷ್ಟ ಪಡಿಸಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಬಿ.ಸಿ.ರಾಜೇಶ್, ಎಂ.ಟಿ.ಸತ್ಯನಾರಾಯಣ, ಪಿ.ಟಿ.ಕೇಶವೇಗೌಡ, ವೀಸ್ವನಾಥ್, ಎಸ್.ಪಿ.ಜಯಪ್ಪ ಗೋಷ್ಠಿಯಲ್ಲಿದ್ದರು.

Post a Comment

0 Comments