ಮಕ್ಕಳ ಶಿಕ್ಷಣಕ್ಕೆ ಅಗತ್ಯ ನೆರವು; ಸುರೇಶ್ ಸಿಂಗನಕುಪ್ಪೆ ವಾಗ್ದಾನ

ಅರಕಲಗೂಡು: ಕಡು ಬಡತನದಲ್ಲಿರುವ ಆಟೋ ಚಾಲಕರ ಕುಟುಂಬದ ಇಬ್ಬರು ಮಕ್ಕಳ ಶಿಕ್ಷಣಕ್ಕೆ ತಗಲುವ ಎಲ್ಲ ವೆಚ್ಚವನ್ನು ಭರಿಸುವುದಾಗಿ ಅದಿತಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸುರೇಶ್ ಸಿಂಗನಕುಪ್ಪೆ ತಿಳಿಸಿದರು. 

ತಾಲೂಕಿನ ಮಲ್ಲಿಪಟ್ಟಣದಲ್ಲಿ ಶನಿವಾರ ಓಂ ಶ್ರೀ ವಿನಾಯಕ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ  ಮಾತನಾಡಿದರು.

ಜಗತ್ತಿನ ಭಾಷೆಗಳಲ್ಲೇ ಅಪಾರ ಸಾಹಿತ್ಯ ಸಂಪತ್ತು ಹೊಂದಿರುವ ಕನ್ನಡಕ್ಕೆ ವಿಶೇಷ ಸ್ಥಾನವಿದೆ.   ನಾಡು ನುಡಿ ಬಗ್ಗೆ ಎಲ್ಲರೂ ಅಭಿಮಾನ ಬೆಳೆಸಿಕೊಳ್ಳಬೇಕು.  ಕನ್ನಡದ ಅಸ್ಮಿತೆ ಕಾಪಾಡುವಲ್ಲಿ ಆಟೋ ಚಾಲಕರು ಇಂತಹ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ನಾಡು ನುಡಿಯ ಉಳಿವಿಗೆ ಸಹಕಾರಿಯಾಗಿದ್ದಾರೆ ಗಣ್ಯರು ಆಶಯ ನುಡಿಗಳನ್ನಾಡಿದರು.

ಗ್ರಾಪಂ ಮಾಜಿ ಅಧ್ಯಕ್ಷರಾದ ಎ.ಸಿ. ಸುರೇಶ್, ಡಾ. ವಿಶ್ವನಾಥ್, ಉದ್ಯಮಿ ಕೇಶವಮೂರ್ತಿ,
ಅಟೊ ಚಾಲಕರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು. 

ಸುರೇಶ್ ಸಿಂಗನಕುಪ್ಪೆ ಅವರು ಅನ್ನ ದಾಸೋಹ ಏರ್ಪಡಿಸಿದ್ದರು. ಆಕರ್ಷಕವಾದ ಮನರಂಜನಾ ಕಾರ್ಯಕ್ರಮ ನಡೆಯಿತು.

Post a Comment

0 Comments