ಅರಕಲಗೂಡು: 67ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಮಂಗಳವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಿದ್ದ ಕನ್ನಡಾಭಿಮಾನ ರಥ ಯಾತ್ರೆ ವಿವಿಧೆಡೆ ಸಂಚರಿಸಿತು.
ಪಟ್ಟಣ ಸೇರಿದಂತೆ ಮಲ್ಲಿಪಟ್ಟಣ, ಕೊಣನೂರು, ರಾಮನಾಥಪುರ, ದೊಡ್ಡಮಗ್ಗೆ ಹೋಬಳಿಯಲ್ಲಿ ಬೈಕ್ ರ‍್ಯಾಲಿ ಮೂಲಕ ರಥ ಯಾತ್ರೆ ಸಾಗಿತು. ಸ್ಥಳೀಯ ಜನಪ್ರತಿನಿಧಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಮುಖಂಡರು ರಥ ಯಾತ್ರೆಗೆ ಪೂಜೆ ಸಲ್ಲಿಸಿ ಸಂಭ್ರಮದ ಸ್ವಾಗತ ಕೋರಿದರು.
ಮಲ್ಲಿಪಟ್ಟಣಕ್ಕೆ ಆಗಮಿಸಿದಾಗ ಗ್ರಾಪಂ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ, ಉಪಾಧ್ಯಕ್ಷ ನಾಗರಾಜ್, ಸದಸ್ಯರು ಸ್ಥಳೀಯರು ಸ್ವಾಗತಿಸಿದರು. ಮುಖಂಡರಾದ ರಮೇಶ್ ವಾಟಾಳ್, ನಟೇಶ್ ಕುಮಾರ್, ಅರುಣ್ ಇತರರಿದ್ದರು.
0 Comments