ಅರಕಲಗೂಡು: ಮುಂದಿನ ವಿಧಾನಸಭಾ ಚುನಾವಣೆ ನನಗೆ ಕೊನೆಯ ಚುನಾವಣೆಯಾಗಿದ್ದು ಮತದಾರರು ಕೈ ಹಿಡಿದು ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ಮಾಜಿ ಸಚಿವ ಎ. ಮಂಜು ಮನವಿ ಮಾಡಿದರು.
ಪಟ್ಟಣದ ಕ್ರೀಡಾಂಗಣದಲ್ಲಿ ಎ. ಮಂಜು ಅಭಿಮಾನಿ ಬಳಗದ ವತಿಯಿಂದ ಮಂಗಳವಾರ ರಾತ್ರಿ ಹಮ್ಮಿಕೊಂಡಿದ್ದ 67ನೇ ಕನ್ನಡ ರಾಜ್ಯೋತ್ಸವ ಹಾಗೂ ಎ. ಮಂಜು ಅವರ 65ನೇ ವರ್ಷದ ಹುಟ್ಟುಹಬ್ಬ ಆಚರಣೆ ಸಮಾರಂಭದಲ್ಲಿ ಜನ್ಮದಿನ ಆಚರಿಸಿಕೊಂಡು ಮಾತನಾಡಿದ ಅವರು,
ನನ್ನ ತಂದೆ ತಾಯಿ ಜನ್ಮ ನೀಡಿದ್ದಾರೆ, ಆದರೆ ನನ್ನನ್ನು ರಾಜಕೀಯವಾಗಿ ಎತ್ತರಕ್ಕೆ ಬೆಳೆಸಿದ್ದು ಕ್ಷೇತ್ರದ ಜನರು. ಅರಕಲಗೂಡು ಹಿಂದೆ ಹೇಗಿತ್ತು, ನಾನು ಸಚಿವನಾಗಿದ್ದ ಎರಡು ವರ್ಷಗಳಲ್ಲಿ ಎಷ್ಟೊಂದು ಅಭಿವೃದ್ಧಿ ಕೆಲಸಗಳಾಗಿವೆ ಎಂಬುದನ್ನು ಜನತೆ ಅರ್ಥ ಮಾಡಿಕೊಳ್ಳಬೇಕು. ಬೇರೆ ತಾಲೂಕುಗಳಿಗೆ ಸರಿಸಮವಾಗಿ ಹಿಂದುಳಿದಿದ್ದ ಅರಕಲಗೂಡು ಅಭಿವೃದ್ಧಿ ಪಡಿಸಿದ್ದೆನೆ, ಇದಕ್ಕೆ ರಾಜಕೀಯವಾಗಿ ನೀವು ನೀಡಿದ ಶಕ್ತಿಯೇ ಕಾರಣ, ನನ್ನನ್ನು ಇಲ್ಲಿತನಕ ಕಾಪಾಡಿದ್ದೀರಿ, ಮುಂದೆ ಯಾರೂ ಕೂಡ ಜನರ ಏಳಿಗೆಗೆ ತಡೆಯೊಡ್ಡಿ, ಯಾರ ಮನಸ್ಸನ್ನು ನೋಯಿಸಬೇಡಿ, ಇದು ನನ್ನ ಕಡೆ ಚುನಾವಣೆಯಾಗಿದ್ದು ಮತದಾರರೇ ನನಗೆ ದೇವರಾಗಿದ್ದು ಇನ್ನೊಂದು ಕೊನೆಯ ಅವಕಾಶ ನೀಡಿ ತಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಲು ಆಶೀರ್ವದಿಸಬೇಕು ಎಂದು ಕೇಳಿಕೊಂಡರು.
ಹಾಸನ ಆದಿ ಚುಂಚನಗಿರಿ ಮಠದ ಶ್ರೀ ಶಂಭುನಾಥಸ್ವಾಮೀಜಿ ಆಶೀರ್ವಚನ ನೀಡಿ, ಪುಣ್ಯದ ಕಾಯಕ ಮಾಡಿದವರನ್ನು ಜನತೆ ಕೈ ಹಿಡಿಯುತ್ತಾರೆ, ಉತ್ತಮ ಸೇವಾ ಸಾಧನೆಗಳಿಗೆ ಹೆಸರಾದ ಎ. ಮಂಜು ಅವರು ಇಷ್ಟೊಂದು ಜನ ಸಮುದಾಯದ ಅಭಿಮಾನ ಸಂಪಾದಿಸಿದ್ದಾರೆ. ಮಾಜಿ ಸಚಿವ ಎ. ಮಂಜು ಅವರು ಶಾಸಕ, ಸಚಿವರಾಗಿದ್ದರೂ ಅವರ ಸರಳತೆ, ಪ್ರೀತಿ ಎಲ್ಲರನ್ನು ಹತ್ತಿರ ಸೆಳೆಯುತ್ತದೆ ಮುಂದೆಯೂ ಇವರ ರಾಜಕೀಯ ಸೇವಾ ಕಾರ್ಯಗಳಿಗೆ ಒಳಿತಾಗಲಿ ಎಂದರು.
ಶ್ರೀಮಠದ ಬಗ್ಗೆ ಗೌರವ ಇಟ್ಟುಕೊಂಡಿದ್ದು, ವಿದ್ಯಾರ್ಥಿಗಳ ಓದಿಗೂ ಸಹಾಯ ಮಾಡುತ್ತಿದ್ದಾರೆ. ಅವರಿಗೆ ದೇವರು ಇನ್ನೂ ಅರೋಗ್ಯ, ಆಯಸ್ಸು ನೀಡಿ, ತಾಲೂಕಿನ ಜನತೆಯ ಸೇವೆ ಮಾಡುವ ಭಾಗ್ಯ ನೀಡಲಿ ಎಂದು ಆಶೀರ್ವದಿಸಿದರು.
ಉರಿಲಿಂಗಿಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ಆಶೀರ್ವಚನ ನೀಡಿ, ಸ್ವಾರ್ಥಿ ತನಗೋಸ್ಕರ ಬದುಕಿದರೆ ಸ್ವಾಭಿಮಾನ ಸಮಾಜಕ್ಕಾಗಿ ದುಡಿಯುತ್ತಾನೆ, ಸಚಿವರಾಗಿದ್ದ ಎ. ಮಂಜು ಅವರು ಎಲ್ಲ ಸಮುದಾಯದ ಜನರ ಆಶಯಗಳ ಈಡೇರಿಕೆಗಾಗಿ ಶ್ರಮಿಸಿದ್ದಾರೆ ಎಂದರು.
ದೊಡ್ಡವ್ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿ, ವಿಶ್ವದೆಲ್ಲೆಢ ಕನ್ನಡದ ಕಂಪು ಹರಡಿ ಭಾಷೆ ಬೆಳೆಸಿದರೆ ಅದು ಕನ್ನಡದ ಭೂಮಿಯಾಗಲಿದೆ ನಾಡು ನುಡಿಗಾಗಿ ಹೆಚ್ಚುಭಾಷಾಭಿಮಾನ ಬೆಳೆಸಿಕೊಳ್ಳಬೇಕಿದೆ ಎಂದರು.
ಅರೇಮಾದನಹಳ್ಳಿ ಮಠದ ಶ್ರೀ ಶಿವಸುಜ್ಞಾತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಕ್ಷೇತ್ರದ ಅಭಿವೃದ್ಧಿಗೆ ಮಂಜು ಅವರು ವಿಶೇಷವಾದ ಕೊಡುಗೆ ನೀಡಿ ಜನಸೇವೆ ಮಾಡಿದ್ದಾರೆ. ಇಂಗ್ಲಿಷ್ ವ್ಯಾಮೋಹದಿಂದಾಗಿ ಇಂದು ಪ್ರತಿ ಮನೆಯಲ್ಲಿ ನಾವು ಕನ್ನಡ ಉಳಿಸುತ್ತಿರುವ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.
ಚಿಲುಮೆ ಮಠದ ಶ್ರೀ ಜಯದೇವ ಸ್ವಾಮೀಜಿ, ತೇಜೂರು ವ್ಮಠದ ಶ್ರೀ ಕಲ್ಯಾಣ ಸ್ವಾಮೀಜಿ, ಟಿ. ಮಾಯಿಗೌಡನಹಳ್ಳಿ ವ್ಮಠದ ಶ್ರೀ ಸೋಮಶೇಖರ ಸ್ವಾಮೀಜಿ, ಕೆಸವತ್ತೂರು ಮಠದ ಶ್ರೀ ಬಸವರಾಜೇಂದ್ರ ಸ್ವಾಮೀಜಿ, ಜಾಮೀಯಾ ಮಸೀದಿಯ ಅಫೀಜ್ ನುಯಾಜ್, ಕೈಸ್ತಧರ್ಮ ಗುರು ಫೌಲ್ ಡಿಸೋಜಾ, ಅದಿತಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸುರೇಶ್ ಸಿಂಗನಕುಪ್ಪೆ, ಜಿಪಂ ಮಾಜಿ ಸದಸ್ಯರಾದ ಡಾ. ಮಂಥರ್‌ಗೌಡ, ಎಸ್.ಪಿ. ರೇವಣ್ಣ, ಬರಗೂರು ರವಿ, ನಾಗಮಂಗಲ ರಾಜಶೇಖರ್, ಕೆ.ಆರ್. ಹೊಯ್ಸಳ ಹಾಗೂ ಅಭಿಮಾನಿಗಳು ಇದ್ದರು. ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.
ಮಠಾಧೀಶರು, ಅಭಿಮಾನಿಗಳ ಸಮ್ಮುಖದಲ್ಲಿ ಮಾಜಿ ಸಚಿವ ಎ. ಮಂಜು ಅವರು ತಮ್ಮ ಕುಟುಂದವರೊಂದಿಗೆ ಬೃಹತ್ ಕೇಕ್ ಕತ್ತರಿಸಿ ಹುಟ್ಟಹಬ್ಬ ಆಚರಿಸಿಕೊಂಡರು. ಕಲಾವಿದರು ಸಂಗೀತ ರಸಸಂಜೆ ಕಾರ್ಯಕ್ರಮದಲ್ಲಿ ಚಲನಚಿತ್ರನಟ ಶಶಿಗೌಡ, ಪುಟ್ಟಸ್ವಾಮಿ ಹಾಗೂ ಸಿನಿಮಾ ನಟರು, ಕಲಾವಿದರು ವಿವಿಧ ಹಾಡುಗಳನ್ನು ಹಾಡಿ ನೃತ್ಯ ಪ್ರದರ್ಶಿಸಿ ಜನರನ್ನು ರಂಜಿಸಿದರು.
0 Comments