ಮಾಜಿ ಸಚಿವ ಎ. ಮಂಜು ಹುಟ್ಟು ಹಬ್ಬದ ಸಂಭ್ರಮದಲ್ಲಿ ಮಿಂದೆದ್ದ ಅಭಿಮಾನಿಗಳು

ಅರಕಲಗೂಡು: ಪಟ್ಟಣದಲ್ಲಿ ಮಾಜಿ ಸಚಿವ ಎ. ಮಂಜು ಅವರ 65ನೇ ವರ್ಷದ ಹುಟ್ಟು ಹಬ್ಬವನ್ನು ಅಭಿಮಾನಿಗಳು ಸಡಗರ ಸಂಭ್ರಮಗಳಿಂದ ಅಚರಿಸಿದರು.

ಹನ್ಯಾಳು, ರಾಮನಾಥಪುರ, ಕೊಣನೂರಿನಲ್ಲಿ ಅಭಿಮಾನಿಗಳಿಂದ ಹುಟ್ಟು ಹಬ್ಬದ ಶುಭಾಷಯ ಪಡೆದ ಬಳಿಕ ಪಟ್ಟಣದಲ್ಲಿ ಅನಕೃ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಎ. ಮಂಜು ಅವರು ಗ್ರಾಮದೇವತೆ ದೊಡ್ಡಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಆಟೋ ನಿಲ್ದಾಣದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಚಾಲಕರಿಗೆ ಸಮವಸ್ತ್ರ ವಿತರಿಸಿದರು. 

ಅಭಿಮಾನಿಗಳಿಂದ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣ ಹಂಪಲು ವಿತರಿಸಲಾಯಿತು.

ನಂತರ ಶಿಕ್ಷಕರ ಭನದಲ್ಲಿ ಅದಿತಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸುರೇಶ್ ಸಿಂಗನಕುಪ್ಪೆ ನೇತೃತ್ವದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾಜಿ ಸಚಿವ ಎ. ಮಂಜು ಕೇಕ್ ಕತ್ತರಿಸಿ ಅಪಾರ ಅಭಿಮಾನಿಗಳೊಂದಿಗೆ ಹುಟ್ಟು ಹಬ್ಬ ಆಚರಿಸಿಕೊಂಡು ಸಂಭ್ರಮಿಸಿದರು.
ತಹಸೀಲ್ದಾರ್ ಕೆ.ಅರ್. ಶ್ರೀನಿವಾಸ್, ಅದಿತಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಿಂಗನಕುಪ್ಪೆ ಸುರೇಶ್, ಜಿಪಂ ಮಾಜಿ ಸದಸ್ಯರಾದ ಎಸ್.ಪಿ. ರೇವಣ್ಣ, ಬರಗೂರು ರವಿ, ಮುಖಂಡರಾದ ಮಗ್ಗೆ ಮಂಜುನಾಥ್, ನಂದಕುಮಾರ್, ಮುತ್ತಿಗೆ ರಮೇಶ್, ಮಂಜು ಶೆಟ್ಟಿಗೌಡ, ಕೀರ್ತಿರಾಜ್, ವೀರಾಜ್, ಮಧು, ಬಾಣದಹಳ್ಳಿ ಗಣೇಶ್, ರಘು, ರವಿಕುಮಾರ್, ಜಬಿವುಲ್ಲಾ, ನಿಖಿಲ್, ಎ.ಸಿ. ರಮೇಶ್, ಕಲೀಲ್, ವೀರಾಜ್, ಕಾಕೋಡನಹಳ್ಳಿ ಮಂಜು ಹಂಡ್ರAಗಿ ದಿಲೀಪ್ ಹಾಗೂ ಅಭಿಮಾನಿಗಳು ಪಾಲ್ಗೊಂಡಿದ್ದರು.
50 ಮಂದಿ ರಕ್ತದಾನ: ಎ. ಮಂಜು ಹುಟ್ಟು ಹಬ್ಬದ ಅಂಗವಾಗಿ ಶಿಕ್ಷಕರ ಭವನದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಐವತ್ತು ಮಂದಿ ರಕ್ತದಾನ ಮಾಡಿ ಮಾನವೀಯತೆ ಮೆರೆದರು.

ಹಾಸನ ಜಿಲ್ಲಾಸ್ಪತ್ರೆ ರಕ್ತ ನಿಧಿ ವಿಭಾಗದ ಡಾ. ಭುವನ್, ಮಹೇಶ್, ಬಾನುಮತಿ, ಆಶಾ, ಹಣಮಂತ, ಪುನೀತ್ ಅವರು ಸಾರ್ವಜನಿಕರ ಉಚಿತ ರಕ್ತ ಪರೀಕ್ಷೆ ನಡೆಸಿ ಶಿಬಿರದಲ್ಲಿ ಸಹಕರಿಸಿದರು.

Post a Comment

0 Comments