ಅರಕಲಗೂಡು: ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಕರ. ಗಿರೀಶ್ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಹಳ್ಳಿಗಳಿಗೆ ಸೋಮವಾರ ಭೇಟಿ ನೀಡಿ ಸಮುದಾಯದ ಜನರ ಅಹವಾಲು ಆಲಿಸಿದರು.
ವಿಜಿ ಕೊಪ್ಪಲು, ಅರಕಲಗೂಡು, ಬಿಟ್ಟಗೌಡನಹಳ್ಳಿ, ಅರಸೀಕಟ್ಟೆ ಸೇರಿದಂತೆ ಸಮುದಾಯದವರು ನೆಲೆಸಿರುವ ಗ್ರಾಮಗಳಿಗೆ ತೆರಳಿ ಜನರ ಕುಂದು ಕೊರತೆಗಳನ್ನು ಆಲಿಸಿದರು.
ಮಳೆಯಿಂದ ಮನೆ ಕಳೆದುಕೊಂಡು ಸಂಕಷ್ಟದಲ್ಲಿರುವ ಸಂತ್ರಸ್ಥರ ಸಮಸ್ಯೆ ಆಲಿಸಿ, ಮಳೆ ಹಾನಿ ಕುರಿತು ವರದಿ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಿ ಪರಿಹಾರ ದೊರಕಿಸಿಕೊಡುವುದಾಗಿ ಗಿರೀಶ್ ಭರವಸೆ ನೀಡಿದರು.
0 Comments