ಅರಕಲಗೂಡು: ತಾಲೂಕಿನ ಮಲ್ಲಿಪಟ್ಟಣ ಗ್ರಾಮ ಪಂಚಾಯಿತಿ ವತಿಯಿಂದ ಸೋಮವಾರ ನರೇಗಾ ಯೋಜನೆಯ 2022- 23ನೇ ಸಾಲಿನ ಒಂದನೇ ಹಂತದ ಸಾಮಾಜಿಕ ಲೆಕ್ಕ ಪರಿಶೋಧನೆ ವಿಶೇಷ ಗ್ರಾಮಸಭೆ ಹಮ್ಮಿಕೊಳ್ಳಲಾಗಿತ್ತು.
ಗ್ರಾಮದ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಗ್ರಾಪಂ ಅಧ್ಯಕ್ಷ ರಂಗಸ್ವಾಮಿ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ನರೇಗಾ ಯೋಜನೆ ಯೋಜನೆ ಸಹಕಾರಿಯಾಗಿದೆ ಎಂದರು.
ಸಾಮಾಜಿಕ ಲೆಕ್ಕ ಪರಿಶೋಧನೆ ಇಲಾಖೆ ಸಹಾಯಕಿ ಮಾನಸ ಅವರು ನರೇಗಾ ಹಾಗೂ ಹದಿನೈದನೆ ಹಣಕಾಸು ಯೋಜನೆಯಡಿ ಅನುಷ್ಠಾನಗಡಿರುವ ಕಾಮಗಾರಿಗಳ ವಿವಿರ ಕುರಿತು ಲೆಕ್ಕ ಮಂಡಿಸಿದರು.
ನೋಡೆಲ್ ಅಧಿಕಾರಿ ಅಜಿತ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಸಂಯೋಜಕ ದೇವರಾಜು, ಗ್ರಾಪಂ ಉಪಾಧ್ಯಕ್ಷ ನಾಗರಾಜು, ಸದಸ್ಯರಾದ ಸುಮಿತ್ರ, ಯಶೋಧ, ಲಕ್ಷö್ಮಮ್ಮ, ಪೂಜಾ, ಲಲಿತಾ, ಜಯಲಕ್ಷ್ಮೀ, ಚಂದ್ರೇಗೌಡ, ಪ್ರಕಾಶ್, ಯೋಗೇಶ್, ಪಿಡಿಒ ಅರುಣ್ ಕುಮಾರ್, ಕಾರ್ಯದರ್ಶಿ ಕೃಷ್ಣೇಗೌಡ ಇತರರಿದ್ದರು.
0 Comments