ಅರಕಲಗೂಡು: ತಾಲೂಕಿನ ಕಾಳೇನಹಳ್ಳಿ ಗ್ರಾಮದ ಗ್ರಾಮ ಪಂಚಾಯಿತಿ ಆವರಣದ ಮುಂಭಾಗ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿ ಸ್ಥಾಪನೆಗೆ ಸೋಮವಾರ ಭೂಮಿಪೂಜೆ ನೆರವೇರಿಸಲಾಯಿತು.
ಅರಕಲಗೂಡು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಾರದ ಪ್ಲಥ್ವಿರಾಜ್, ವಕೀಲ ಬಿ.ಸಿ. ರಾಜೇಶ್ ಭೂಮಿಪೂಜೆ ಮಾಡಿದರು. ಮುಖಂಡರಾದ ಚಂದ್ರಣ್ಣ, ಅತ್ನಿ ಹರೀಶ್, ರಮೇಶ್ ಮರಿಲಕ್ಕಿ, ದಿನೇಶ್, ಯಾಚನಕುಪ್ಪೆ ಮೂರ್ತಿ, ಬಸವಾಪಟ್ಟಣದ ಹರೀಶ್,ಪ್ರದೀಪ್, ರವಿ ಗರುಡನಹಳ್ಳಿ, ರಾಜೇಶ್, ಗ್ರಾಪಂ ಸದಸ್ಯರಾದ ಬಸವನಹಳ್ಳಿ ಮಂಜಯ್ಯ, ಶೋಭ ವಾಸು, ಮಾಜಿ ಸದಸ್ಯ ತವ್ಮ್ಮಯ್ಯ, ಹಾಗೂ ಯಾಚನಕುಪ್ಪೆ, ಬಸವನಹಳ್ಳಿ, ಗರುಡನಹಳ್ಳಿ, ಕೇರಳಾಪುರ, ಬಸವಾಪಟ್ಟಣ ಕಾನನಕೊಪ್ಪಲು, ಬೆಟ್ಟಸೋಗೆ ಮತ್ತು ಹೊನ್ನೇನಹಳ್ಳಿ ಗ್ರಾಮದ ಅಂಬೇಡ್ಕರ್ ಯುವಕ ಸಂಘಗಳ ಸದಸ್ಯರು ಇದ್ದರು.
0 Comments