ರಾಮನಾಥಪುರ; ಬೀಳ್ಕೊಡುಗೆ ಸಮಾರಂಭದ ಅಭಿಮಾನದಲ್ಲಿ ಮಿಂದೆದ್ದ ಸಿ.‌ಸ್ವಾಮಿ

ಅರಕಲಗೂಡು: ಅಧಿಕಾರ ಯಾರಿಗೂ ಶಾಶ್ವತವಲ್ಲ, ಆದರೆ ಸಿಕ್ಕ ಅಧಿಕಾರಾವಧಿ ವೇಳೆ ಉತ್ತಮವಾಗಿ ಕಾರ್ಯ ನಿರ್ವಹಿಸಿ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಕರ್ತವ್ಯ ಸಲ್ಲಿಸುವ ವ್ಯಕ್ತಿಯ ಸೇವೆಗೆ ಏನೊಂದನ್ನೂ ಬೆಲೆಕಟ್ಟಲಾಗದು, ಇಂತಹ ವ್ಯಕ್ತಿಗಳಿಗೆ ಸಮಾಜ ಉನ್ನತ ಸ್ಥಾನಮಾನ ನೀಡಿ ಸದಾ ಸ್ಮರಿಸುತ್ತದೆ ಸಕಲೇಶಪುರ ಉಪ ವಿಭಾಗಾಧಿಕಾರಿ ಪ್ರತೀಕ್ ಬಾಯಲ್ ಹೇಳಿದರು.

ತಾಲೂಕಿನ ರಾಮನಾಥಪುರದಲ್ಲಿ ರಾಜಸ್ವ ನಿರೀಕ್ಷಕರಾಗಿ ಸೇವೆ ಸಲ್ಲಿಸಿ ಉಪ ತಹಸೀಲ್ದಾರ್ ಮುಂಬಡ್ತಿ ಪಡೆದು ವರ್ಗಾವಣೆಯಾದ ಸಿ. ಸ್ವಾಮಿ ಅವರು ಹೋಬಳಿ ಜನರು ಮಂಗಳವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಾವುದೇ ನೌಕರರಿಗೆ ನಿವೃತ್ತಿ ಹಾಗೂ ಮುಂಬಡ್ತಿ ಹೊಂದಿದರೆ ಕಚೇರಿಯಲ್ಲಿ ಬೀಳ್ಕೊಡುವುದು ಸಾಮಾನ್ಯ.

ಆದರೆ ಸ್ವಾಮಿ ಅವರ ಜನಸೇವೆ ಮೆಚ್ಚಿ ಜನರೇ ಬಿಳ್ಕೊಡುತ್ತಿದ್ದಾರೆ. ಕಾವೇರಿ ನದಿ ಪ್ರವಾಹ ಸಂದರ್ಭದಲ್ಲಿ ರಾತ್ರಿ ಹಗಲೆನ್ನದೆ ಹಾಗೂ ಕರೊನಾ ಕಾಲದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿ, ಮಳೆಯಿಂದ ಮನೆ ವ್ಮಠ ಕಳೆದುಕೊಂಡ ಸಚಿತ್ರಸûರಿಗೆ ಪರಿಹಾರ ಧಕ್ಕಿಸಿಕೊಡುವಲ್ಲಿ ಯಶಸ್ವಿ ಸೇವೆ ಸಲ್ಲಿಸಿ ಮನೆಮಾತಾಗಿದ್ದಾರೆ. ಸಾವಿರಾರು ಜನರಿಗೆ ಪಿಂಚಣಿ ಸೌಲಭ್ಯ ಕೊಡಿಸಿದ್ದಾರೆ. ಎಲ್ಲ ಹಂತದ ಸರ್ಕಾರಿ ಸೇವೆಯಲ್ಲಿ ಸೈ ಎನಿಸಿಕೊಂಡಿದ್ದಾರೆ. ಮುಂದೆಯೂ ಇವರ ಸೇವೆ ಜನತೆಗೆ ಲಭಿಸಿ ಉನ್ನತ ಹುದ್ದೆ ಅಲಂಕರಿಸುವಂತಾಗಲಿ ಎಂದು ತಿಳಿಸಿದರು.

ತಹಸೀಲ್ದಾರ್ ಕೆ.ಆರ್. ಮಾತನಾಡಿ, ಸಿ. ಸ್ವಾಮಿ ಅವರ ಸರ್ಕಾರಿ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಒಬ್ಬ ಸರ್ಕಾರಿ ನೌಕರರ ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ರಾಮನಾಥಪುರ ಹೋಬಳಿಯ ಎಲ್ಲ ಗ್ರಾಮಸ್ಥರು ಒಗ್ಗೂಡಿ ಅಪಾರ ಜನಸ್ತೊಮ ಸೇರಿರುವುದು ನಾ ಕಂಡAತೆ ಇದೇ ಪ್ರಥಮವಾಗಿದೆ ಎಂದರು.

ಸಾರ್ವಜನಿಕರಿAದ ಸನ್ಮಾನ ಸ್ವೀಕರಿಸಿ ಸಿ. ಸ್ವಾಮಿ ಅವರು ಮಾತನಾಡಿ, ಸರ್ಕಾರಿ ಸೇವೆ ಸಮಯದಲ್ಲಿ ಈ ಭಾಗದ ಜನರು ನೀಡಿದ ಸಹಕಾರಕ್ಕೆ ಸದಾ ಚಿರIಣಿ ಎಂದರು.

ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಚನ್ನಕೇಶವ, ತಾಲೂಕು ಕಸಾಪ ವಿಷ್ಣುಪ್ರಕಾಶ್, ಗ್ರಾಪಂ ಅಧ್ಯಕ್ಷ ಮಂಜುಳ ಧನಂಜಯ್, ಜಿಪಂ ಮಾಜಿ ಸದಸ್ಯರಾದ ಬರಗೂರು ರವಿ, ಎಚ್.ಎಸ್. ಶಂಕರ್, ಶಿಕ್ಷಕರಾದ ದೇವರಾಜು, ದ್ಯಾವಯ್ಯ ಕುಳ್ಳಯ್ಯ, ಗ್ರಾಪಂ ಸದಸ್ಯರಾದ ಸುನೀಲ್, ರಾಘು, ಕುಮಾರ್, ಯೋಗೀಶ್, ಮಹೇಶ್, ಮಾಜಿ ಸದಸ್ಯರಾದ ಮಧುರನಹಳ್ಳಿ ಶ್ರೀನಿವಾಸ್, ಸುಭೇದಾರ್ ಕೊಪ್ಪಲು ಮಹದೇವು, ಜಿಟ್ಟೇನಹಳ್ಳಿ ಸತೀಶ್, .ಬಸವನಹಳ್ಳಿ ರವಿ, ನಾಡಕಚೇರಿ ಸಿಬ್ಬಂದಿ ಇದ್ದರು. ಸಿ. ಸ್ವಾಮಿ ದಂಪತಿ ಸಂಪತ್ ಕುಮಾರಿ ಅವರಿಗೆ ಹೋಬಳಿಯ ವಿವಿಧ ಗ್ರಾಮಗಳ ಜನರು ಸನ್ಮಾನಿಸಿದರು. 

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕ ವಿತರಿಸಲಾಯಿತು.

Post a Comment

0 Comments