ಅರಕಲಗೂಡು: ಗ್ರಾಮಗಳಲ್ಲಿ ದೇವಸ್ಥಾನಗಳನ್ನು ನಿರ್ಮಿಸುವುದರಿಂದ ಜನರಲ್ಲಿ ಒಗ್ಗಟ್ಟು ಮತ್ತು ಭಕ್ತಿ ಹೆಚ್ಚಾಗುತ್ತದೆ ಎಂದು ಬಿಜೆಪಿ ಮುಖಂಡ ಎಚ್. ಯೋಗಾರಮೇಶ್ ತಿಳಿಸಿದರು.
ಪೆಮ್ಮನಹಳ್ಳಿ ಗ್ರಾಮದಲ್ಲಿ ಬಸವೇಶ್ಬರ ದೇವಸ್ಥಾನ ಜೀರ್ಣೋದ್ಧಾರಕ್ಕೆ ಧನ ಸಹಾಯ ಮಾಡಿ ಮಾತನಾಡಿದ ಅವರು, ದೇಶದ ಮೇಲೆ ಹಲವರು ದಾಳಿ ಮಾಡಿದ್ದರೂ ನಮ್ಮ ಸಂಸ್ಕೃತಿ ಇನ್ನೂ ಉಳಿದಿದೆ. ಇದಕ್ಕೆ ನಮ್ಮಲ್ಲಿರುವ ದೇವರ ಬಗ್ಗೆ ನಿಷ್ಠೆ ಮತ್ತು ಕಾಲಕಾಲಕ್ಕೆ ದೇವಸ್ಥಾನ ಪುನರ್ ಪ್ರತಿಷ್ಠಾಪನೆ ಮಾಡುತ್ತಿರುವುದೇ ಮುಖ್ಯ ಕಾರಣ ಎಂದರು.
ದೇವಾಲಯನಿರ್ಮಾಣ ಕೆಲಸ ಗ್ರಾಮೀಣ ಭಾಗದಲ್ಲಿ ಹೆಚ್ಚು ಆಗುತ್ತಿದೆ.ಜನರು ಎಷ್ಟೇ ಸಾಲ ಮಾಡಿದ್ದರೂ, ಯಾವುದೇ ಪಕ್ಷದಲ್ಲಿದ್ದರೂ ದೇವರ ಕಾರ್ಯ ಎಂದಾಗ ಹಣವನ್ನು ಹೊಂದಿಸಿ, ಪಕ್ಷಬೇಧ ಮರೆತು ಎಲ್ಲರೂ ಒಗ್ಗಟ್ಟಾಗಿ ದೇವರ ಕಾರ್ಯವನ್ನು ಮಾಡುತ್ತಾರೆ. ಇನ್ನೂ ಹೆಚ್ಚು ದೇವರ ಕಾರ್ಯಗಳು ನಡೆಯಬೇಕು ಎಂದರು.
ಬಿಜೆಪಿ ಮುಖಂಡ ಕೇಶವೇಗೌಡ, ಗ್ರಾಮಸ್ಥರಾದ ತಿಮ್ಮೆಗೌಡ, ಶಿವರಾಜ್, ರಾಮೇಗೌಡ, ಮಂಜೇಗೌಡ ಮತ್ತಿತರಿದ್ದರು.
0 Comments