ಮಲ್ಲಿಪಟ್ಟಣದಲ್ಲಿ ಸ್ವಚ್ಚತಾ ಕಾರ್ಯ; ಶುಚಿತ್ವಕ್ಕಾಗಿ‌ ಎಲ್ಲೆಂದರಲ್ಲಿ ಕಸ ಬೀಸಾಡದಿರಿ

ಅರಕಲಗೂಡು: ವಿದ್ಯಾರ್ಥಿಗಳು ವಿದ್ಯಾರ್ಥಿ ದಿಸೆಯಲ್ಲೇ ಸ್ವಚ್ಚತಾ ಕಾರ್ಯಕ್ಕೆ ಒತ್ತು ನೀಡುವ ಮನೋಧರ್ಮ ಬೆಳೆಸಿಕೊಳ್ಳಬೇಕು ಎಂದು ಮಲ್ಲಿಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ ಸಲಹೆ ನೀಡಿದರು.

ತಾಲೂಕಿನ ಮಲ್ಲಿಪಟ್ಟಣ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಜಿಪಂ, ತಾಪಂ ಮತ್ತು ಗ್ರಾಪಂ ಸಹಯೋಗದಲ್ಲಿ ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ಆಯೋಜಿಸಿದ್ದ ಸ್ವಚ್ಷತಾ ಆಂದೋಲನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆರೋಗ್ಯದ ಹಿತ ದೃಷ್ಟಿಯಿಂದ ಸ್ವಚ್ಚತೆಗೆ ಎಲ್ಲರೂ ಒತ್ತು ನೀಡಬೇಕು.‌ಆದರೆ, ಇಂದಿನ ದಿನಮಾನಗಳಲ್ಲಿ ಸ್ವಚ್ಚ ಪರಿಸರ ಕಾಪಾಡುವ ಯೋಚನೆ ಇಲ್ಲವಾಗಿದೆ. ಒಂದೆಡೆ ಉತ್ತಮ ಪರಿಸರ ಇಲ್ಲದೆ ಮತ್ತೊಂದೆಡೆ ಅನೈರ್ಮಲ್ಯತೆ ಹೆಚ್ಚುತ್ತಿದೆ. ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಬಿಸಾಡುವುದನ್ನು ನಿಲ್ಲಿಸಬೇಕು. 

ವಿದ್ಯಾರ್ಥಿಗಳು ಕೂಡ ಶಿಕ್ಷಣಕ್ಕೆ ನೀಡುವಷ್ಟೆ ಆದ್ಯತೆಯನ್ನು ಸ್ವಚ್ಚತೆ ಕಡೆಗೂ ಗಮನ ಹರಿಸಬೇಕು, ತಮ್ಮ ಪೋಷಕರು ಮತ್ತು ಮನೆ ಮಂದಿಗೆಲ್ಲ ಶುಚಿತ್ವದ ಕಾಪಾಡುವ ಬಗ್ಗೆ ಪ್ರೇರೇಪಿಸಬೇಕು. ಸ್ವಚ್ಚತೆ ಕಾಪಾಡಿದರೆ ರೋಗ ರುಜಿನಗಳಿಂದ ದೂರವುಳಿಯಬಹುದು ಎಂದು ಕಿವಿಮಾತು ಹೇಳಿದರು.

ಗ್ರಾಪಂ ಉಪಾಧ್ಯಕ್ಷ ನಾಗರಾಜು, ಪಿಡಿಒ ಅರುಣ್ ಕುಮಾರ್, ಕಾರ್ಯದರ್ಶಿ ಕೃಷ್ಣೇಗೌಡ, ಪ್ರಾಂಶುಪಾಲೆ ಚಂದ್ರಕಲಾ, ಉಪನ್ಯಾಸಕರು, ಸಿಬ್ಬಂದಿ ಇದ್ದರು. ಸ್ವಚ್ಚತಾ ಕಾರ್ಯ ನಡೆಸಲಾಯಿತು.

Post a Comment

0 Comments