ವಿಶ್ವಕರ್ಮ ಸಮುದಾಯದ ಕೊಡುಗೆ ಅವಿಸ್ಮರಣೀಯ; ಶಾರದಾ ಪೃಥ್ವಿರಾಜ್

ಅರಕಲಗೂಡು: ಜಾಗತಿಕ ಮಟ್ಟದಲ್ಲಿ ಭಾರತೀಯ ಸಾಂಸ್ಕೃತಿಕ ಪರಂಪರೆಯ ಪ್ರಸಿದ್ಧಿಗೆ ವಿಶ್ವಕರ್ಮ ಸಮುದಾಯ ಅವಿಸ್ಮರಣೀಯ ಕೊಡುಗೆ ನೀಡಿದೆ ಎಂದು ಪಪಂ ಅಧ್ಯಕ್ಷೆ ಶಾರದಾ ಪೃಥ್ವಿರಾಜ್ ಹೇಳಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರಮಕ್ಕೆ ಹೆಸರಾದ ವಿಶ್ವಕರ್ಮ ಸಮುದಾಯದವರು ಚಿನ್ನ, ಬೆಳ್ಳಿ ಕೆಲಸ ಹಾಗೂ ಮರ ಕೆತ್ತನೆ ಹಾಗೂ ವಿಶೇಷವಾಗಿ ವಿಗ್ರಹ ಕೆತ್ತನೆ ಮಾಡುವವರಾಗಿದ್ದು ಬೇಲೂರು ಹಳೇಬೀಡು ಹಂಪೆ ಇನ್ನೂ ಮುಂತಾದ ಪ್ರಸಿದ್ಧವಾದ ತಾಣಗಳನ್ನು ಪ್ರಸಿದ್ಧಿ ಪಡಿಸಿದ ಇತಿಹಾಸ ವಿಶ್ವಕರ್ಮ ಸಮುದಾಯಕ್ಕೆ ಸಲ್ಲುತ್ತದೆ ಎಂದರು.

 ವಿಶ್ವಕರ್ಮ ಸಂಘದ ಅಧ್ಯಕ್ಷರು ಕೃಷ್ಣನ ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ವಿಲೇಜ್ ಅಕೌಂಟೆಟ್ ವಿನಾಯಕ ಹಿರೇಮಠ ಶಿರಸ್ತೇದಾರರು ಭಾನುಪ್ರಕಾಶ್ ಹಾಗೂ ಅಧಿಕಾರಿ ವರ್ಗದವರು ಇದ್ದರು.

Post a Comment

0 Comments