ಡಾ. ಅಂಬೇಡ್ಕರ್ ಸಹಕಾರ ಸಂಘ ೧.೩೪ ಕೋಟಿ ವಹಿವಾಟು, ೩೮.೨೬ ಲಕ್ಷ ಲಾಭದತ್ತ: ಡಿ. ರಾಮು

ಅರಕಲಗೂಡು: ವಿವಿಧ ಉದ್ದೇಶಗಳಿಗಾಗಿ ಸಾಲ ಸೌಲಭ್ಯಗಳನ್ನು ಒದಗಿಸುವ ಮೂಲಕ ತಾಲೂಕು ಡಾ. ಬಿ.ಆರ್. ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘ 2021- 22ನೇ ಸಾಲಿಗೆ 38.26 ಲಕ್ಷ ರೂ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಡಿ. ರಾಮು ಹೇಳಿದರು.

ಪಟ್ಟಣದ ದೇವರಾಜು ಅರಸು ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂಘದ 2021- 22ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,

ಪ್ರಸಕ್ತ 1.34 ಕೋಟಿ ರೂ ವಹಿವಾಟು ನಡೆಸಿದ್ದು, ಸಂಘವನ್ನು ಲಾಭದತ್ತ ಕೊಂಡೊಯ್ಯಲು ಶ್ರಮಿಸಲಾಗಿದೆ. ಎಲ್ಲರೂ ಸಂಘಕ್ಕೆ ಹೆಚ್ಚಿನ ಸದಸ್ಯರನ್ನು ಷೇರುದಾರರನ್ನಾಗಿಸಬೇಕು ಎಂದು ಮನವಿ ಮಾಡಿದರು.

ಪಪಂ ಅಧ್ಯಕ್ಷೆ ಶಾರದಾ ಪೃಥ್ವಿರಾಜ್ ಮಾತನಾಡಿ, ಸಂಘದ ನಿವೇಶನಕ್ಕೆ ಜಾಗ ನೀಡುವ ಸಂಬAಧ ಪಪಂ ಸಭೆಯಲ್ಲಿ ತೀರ್ಮಾನಿಸಲಾಗುವುದು. ಸಂಘದ ಏಳಿಗೆಗೆ ಕೈಲಾದ ಸಹಾಯ ಮಾಡುವುದಾಗಿ ಭರವಸೆ ನೀಡಿದರು.

ತಾಲೂಕು ಆರೋಗ್ಯಾಧಿಕಾರಿ ಡಾ. ಪುಷ್ಪಲತಾ ಮಾತನಾಡಿ, ಸಮುದಾಯದ ಜನರು ಒಗ್ಗಟ್ಟಿನ ಕೊರತೆ ಹೋಗಲಾಡಿಸಿಕೊಂಡು ಹೆಚ್ಚಿನ ಸದಸ್ಯರನ್ನು ಸೇರ್ಪಡೆಗೊಳಿಸಿ ಸಂಘವನ್ನು ಪ್ರಗತಿ ಪಥದತ್ತ ಮುನ್ನಡೆಸಲು ಇಚ್ಚಾಶಕ್ತಿ ವಹಿಸಬೇಕು. ಸಂಘದ ಅಭಿವೃದ್ಧಿಗೆ ನನ್ನ ಸಹಕಾರವಿದೆ ಎಂದು ತಿಳಿಸಿದರು.
ಮಾಜಿ ಅಧ್ಯಕ್ಷ ಎಚ್.ಸಿ. ಚನ್ನಯ್ಯ, ನಿರ್ದೇಶಕರಾದ ಡಿ.ವಿ. ಗಣೇಶ್, ವೀರಾಜ್, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಯ್ಯ, ದಸಂಸ ಮುಖಂಡ ಎ.ವಿ. ಲಿಂಗರಾಜು ಮಾತನಾಡಿದರು. ಸಾಲ ಮರು ಪಾವತಿ ಅವಧಿ ವಿಸ್ತರಿಸುವಂತೆ ಷೇರುದಾರರು ಸಭೆಯಲ್ಲಿ ಒತ್ತಾಯಿಸಿದರು.

ಸಂಘದ ಕಾರ್ಯದರ್ಶಿ ಪಿ. ವೆಂಕಟಾಚಲಯ್ಯ ಅವರು 2021- 22ನೇ ಸಾಲಿನ ಜಮಾ ಖರ್ಚು ವರದಿ ಓದಿದರು. ಸಂಘದ ಉಪಾಧ್ಯಕ್ಷ ಎಚ್.ಈ. ದೇವರಾಜು, ನಿರ್ದೇಶಕರಾದ ದೊರೆಸ್ವಾಮಿ, ಎ.ಸಿ. ಮಂಜುನಾಥ್, ಡಿ. ನಾಗೇಂದ್ರ ಕುಮಾರ್, ಚನ್ನಯ್ಯ, ಬಸವರಾಜು, ಎಂ.ಎಸ್. ರಮೇಶ್, ಕಮಲಮ್ಮ, ಪುಟ್ಟಮ್ಮ, ಮಾಜಿ ಅಧ್ಯಕ್ಷ ಹಾಗೂ ನಾಮ ನಿರ್ದೇಶಕ ಕೊಣನೂರು ಚನ್ನಕೇಶವಯ್ಯ, ದಲಿತ ಮುಖಂಡ ಚಂದ್ರು, ವಕೀಲ ಶಂಕರಯ್ಯ ಇತರರಿದ್ದರು.

Post a Comment

0 Comments