ಅರಕಲಗೂಡು: ತಾಲೂಕಿನ ಗೊಬ್ಬಳಿ ಕಾವಲು ಗ್ರಾಮದ ಹಿರಿಯ ಮುಖಂಡ ಕೃಷ್ಣೇಗೌಡ (80) ಶುಕ್ರವಾರ ಸಂಜೆ ನಿಧನರಾದರು.
ಜನಾನುರಾಗಿಯಾಗಿದ್ದ ಇವರು ಮೂಲತಃ ಚಿಕ್ಕ ಅರಕಲಗೂಡು ಗ್ರಾಮದವರು. ಹೇಮಾವತಿ ಜಲಾಶಯಕ್ಕೆ ಗ್ರಾಮ ಮುಳುಗಡೆಯಾಗಿತ್ತು. ಇವರಿಗೆ ಮೂವರು ಪುತ್ರರಾದ ವೆಂಕಟೇಶ್, ಸಿ.ಕೆ. ಮೂರ್ತಿ, ವಸಂತ, ಮೊಮ್ಮಕ್ಕಳು, ಅಪಾರ ಬಂಧುಗಳು ಇದ್ದಾರೆ.
ಶನಿವಾರ ಮೃತರ ಅಂತ್ಯಕ್ರಿಯೆ ನೆರವೇರಿತು. ಕಾಂಗ್ರೆಸ್ ಮುಖಂಡ ಎಂ.ಟಿ. ಕೃಷ್ಣೇಗೌಡ, ಮಲ್ಲಿಪಟ್ಟಣ ಗ್ರಾಪಂ ಅಧ್ಯಕ್ಷ ರಂಗಸ್ವಾಮಿ ಅನೇಕ ಗಣ್ಯರು ಮೃತರ ಅಂತಿಮ ದರ್ಶನ ಪಡೆದರು.
0 Comments