ಅರಕಲಗೂಡು: ಭಾರಿ ಮಳೆ ಹೊಡೆತಕ್ಕೆ ಕೊಣನೂರು ಕೆರೆ ಏರಿ ಬಿರುಕು ಬಿಟ್ಟು ಅಪಾಯಕಾರಿ ಸ್ಥಿತಿಯಲ್ಲಿದೆ.
ನಿರಂತರ ಮಳೆ ಹಿನ್ನಲೆಯಲ್ಲಿ ಕೊಣನೂರು ಕೆರೆ ಏರಿ ಕಳೆದ ತಿಂಗಳು ಬಿರುಕು ಕಾಣಿಸಿಕೊಂಡಿತ್ತು.
ಸಂಬಂಧಪಟ್ಟ ಇಲಾಖೆ ಇಂಜಿನಿಯರ್ ಮತ್ತು ಕ್ಷೇತ್ರದ ಜನಪ್ರತಿಧಿ ನಿರ್ಲಕ್ಷ್ಯ ತಳೆದ ಪರಿಣಾಮ ಇಂದು ದೊಡ್ಡದಾಗಿ ಬಿರುಕು ಹರಡಿದ್ದು ಕುಸಿದು ಬೀಳುವ ಸ್ಥಿತಿಗೆ ತಲುಪಿದೆ.
ಕೊಣನೂರು- ಕೆರೆಕೋಡಿ ಮಾರ್ಗವಾಗಿ ಅಪಾರ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಕೆರೆ ಏರಿ ಒಡೆದರೆ ಹಳ್ಳದ ಕಡೆ ಅಚ್ಚುಕಟ್ಟ ಭಾಗದ ಜಮೀನು, ಬೆಲೆ ಬಾಳುವ ತೋಟದ ಜಮೀನು ಕೊಚ್ಚಿ ಹೋಗಿ ಭಾರಿ ಅನಾಹುತವೇ ಒದಗಲಿದೆ.
ಕೆರೆ ಸಾಗರದ ರೀತಿ ಮೈದುಂಬಿ ತುಳುಕುತ್ತಿದೆ. ಇಷ್ಟೆ ಏಕೆ ಕೆರೆ ಏರಿ ಕೂಡ ಕಿಷ್ಕಿಂದೆಯಾಗಿದೆ. ಈಗಲಾದರೂ ಎಚ್ಚೆತ್ತುಕೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
0 Comments