ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿಗಳಿಂದ ಚಾತುರ್ಮಾಸ್ಯ ವ್ರತಾನುಷ್ಠಾನ ಆರಂಭ

ಅರಕಲಗೂಡು: ತಾಲೂಕಿನ ಅರೇಮಾದನಹಳ್ಳಿ ವಿಶ್ವಕರ್ಮ ಜಗದ್ಗುರು ಪೀಠದ ವಿಶ್ವ ಬ್ರಾಹ್ಮಣ ಮಹಾಸಂಸ್ಥಾನ ಮಠದಲ್ಲಿ 40ನೇ ವರ್ಷದ ಚಾತುರ್ಮಾಸ್ಯ ವ್ರತಾನುಷ್ಠಾನ ಕಾರ್ಯಕ್ರಮಕ್ಕೆ ಬುಧವಾರ ವಿದ್ಯುಕ್ತ ಚಾಲನೆ ದೊರೆಯಿತು.

ಶ್ರೀ ವ್ಯಾಸಪೂಜಾ ಹಾಗೂ ಗುರು ಪರಂಪರಾ ಪೂಜಾ ಸಂಕಲ್ಪದೊAದಿಗೆ ಶ್ರೀ ಶಿವಸ್ಮಜ್ಞಾನ ತೀರ್ಥ ಸ್ವಾಮೀಜಿ ಧಾರ್ಮಿಕ ವಿಧಾನಗಳನ್ವಯ ಚಾರ್ತುಮಾಸ್ಯ ವ್ರತಾನುಷ್ಠಾನ ಕಾರ್ಯಕ್ರಮ ಆರಂಭಿಸಿದರು. 

ಮಠದಲ್ಲಿ ಶ್ರೀ ಪ್ಲವನಾಮ ಸಂವತ್ಸರದ ಪ್ರಯುಕ್ತ ಇಂದಿನಿAದ ಸೆ. 10 ವರೆಗೆ 60 ದಿನಗಳ ಕಾಲ ಚಾತುರ್ಮಾಸ್ಯ ವ್ರತಾನುಷ್ಠಾನ ಕಾರ್ಯಕ್ರಮ ನಡೆಯಲಿದೆ. ರಾಜ್ಯದ ವಿವಿಧೆಡೆಗಳಿಂದ ಶ್ರೀಗಳು, ಸಮಾಜದ ಮುಖಂಡರು, ಶಿಷ್ಯರು, ಜನಪ್ರತಿನಿಧಿಗಳು, ಸಮಾಜ ಸೇವಕರು ಭಾಗವಹಿಸಿವರು. 

ಯತೀಶ್ವರರು ಲೋಕಕಲ್ಯಾಣರ್ಥವಾಗಿ ಅಚರಿಸಿದ 60 ದಿವಸಗಳ ಕಾಲ ನಡೆದ ತಪ, ಹೋಮಾದಿ ಪೂಜೆಗಳು ಅನಂತ ಫಲದಾಯಕಗಳು ದೊರೆಯುತ್ತವೆ ಎಂದು ನುಡಿದರು.

Post a Comment

0 Comments