ದೊಡ್ಡಮ್ಮ ಹಬ್ಬದ ಜಾತ್ರೆಗೆ ಅಗತ್ಯ ಮುನ್ನೆಚ್ಚರಿಕೆ ವಹಿಸಿ: ಭಕ್ತರಿಗೆ ಶುಭ ಕೋರಿ ಮನವಿ ಮಾಡಿದ ಎ. ಮಂಜು

ಅರಕಲಗೂಡು:  ಪಟ್ಟಣದಲ್ಲಿ ಜೂ. 7 ಮತ್ತು 8ರಂದು ನಡೆಯುವ ಗ್ರಾಮದೇವತೆ ದೊಡ್ಡಮ್ಮ ಹಾಗೂ ಚಿಕ್ಕಮ್ಮ ಹಬ್ಬದ ಜಾತ್ರೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ  ಕ್ರಮಗಳನ್ನು ತಾಲೂಕು ಆಡಳಿತ ಕೈಗೊಳ್ಳಬೇಕು, ನಾಗರಿಕರು ಇದಕ್ಕೆ ಸಹಕಾರ ನೀಡಬೇಕು ಎಂದು ಮಾಜಿ ಸಚಿವ ಎ. ಮಂಜು ತಿಳಿಸಿದರು.

ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಜಾತ್ರೆ ಕೋವಿಡ್ ಕಾರಣಕ್ಕಾಗಿ ಎರಡು ವರ್ಷ ತಡವಾಗಿದ್ದು ಈ ಬಾರಿ ವಿಜೃಂಭಣೆಯಿಂದ ನಡೆಯುವ ಕಾರಣಅತ್ಯಂತ ಹೆಚ್ಚಿನ ಜನರು ಸೇರುತ್ತಾರೆ. ಇ ಹಿನ್ನಲೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಸುಗಮ ಸಂಚಾರ ವ್ಯವಸ್ಥೆಗೆ ಪೊಲೀಸರು ಮತ್ತು ತಾಲೂಕು ಆಡಳಿತ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಗ್ರಾಮದೇವತೆ ಶತಮಾನದ ಇತಿಹಾಸವಿದೆ. ಜನರ ನಂಬಿಕೆಯ ದೈವವಾದ ಗ್ರಾಮದೇವತೆ ಮಳೆ ಬೆಳೆ ಆರೋಗ್ಯ ಸಮೃದ್ಧಿಯನ್ನು ಕರುಣಿಸಲಿ. ಸಂಪ್ರದಾಯಬದ್ದವಾದ ಪೂಜಾ ವಿಧಾನಗಳು ನೆರವೇರಲಿ ಎಂದು ಹೇಳಿದರು.

ತಾಲೂಕು ಕ್ರೀಡಾಂಗಣದಲ್ಲಿ ನನ್ನ ಅಭಿಮಾನಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ ಎಂದರು.

Post a Comment

0 Comments