ಮದಲಾಪುರ ಹಾಲಿನ ‌ಡೇರಿಗೆ ನಿರ್ದೇಶಕರ ಅವಿರೋಧ ಆಯ್ಕೆ

ಅರಕಲಗೂಡು: ತಾಲೂಕಿನ ಮದಲಾಪುರ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ  ಸಂಘದ ಅಧ್ಯಕ್ಷರಾಗಿ ರಾಜಲಕ್ಷ್ಮೀ ರಂಗಸ್ವಾಮಿ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ.

ಸಂಘದ ಆಡಳಿತ ಮಂಡಳಿಗೆ ಐದು ವರ್ಷದ ಕಾಲಾವಧಿ ವರೆಗೆ ಹನ್ನೊಂದು ನಿರ್ದೇಶಕರ ಸ್ಥಾನಕ್ಕೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಎಲ್ಲರೂ ಅವಿರೋಧವಾಗಿ ಆಯ್ಕೆಯಾದರು.

ನಿರ್ದೇಶಕರಾಗಿ ಅನಿತಾ ರಂಗೇಗೌಡ, ಕಮಲಾ ಲೋಕೇಶ್, ಗೌರಮ್ಮ ರಾಮೇಗೌಡ, ಲೀಲಾವತಿ ಸ್ವಾಮೀಗೌಡ, ಮಂಜುಳಮ್ಮ ದೇವರಾಜೇಗೌಡ, ಸುಶೀಲ ಶಿವೇಗೌಡ, ಲತಾ ನಾಗರಾಜು, ನಾಗರತ್ನ ಚನ್ನಕೇಶವಮೂರ್ತಿ, ಮಮತಾ ರಂಗನಾಥ್ ಹಾಗೂ ಕಾರ್ಯದರ್ಶಿಯಾಗಿ ಲತಾ ಲೋಕೇಶ್ ಆಯ್ಕೆಯಾಗಿದ್ದಾರೆ.

ಸಂಘದ ನವೀನ್ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ನೂತನ ನಿರ್ದೇಶಕರನ್ನು ಮಲ್ಲಿಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ ಅಭಿನಂದಿಸಿದ್ದಾರೆ.

Post a Comment

0 Comments