ಅರಕಲಗೂಡು: ಮನುಷ್ಯ ಉನ್ನತ ಚಿಂತನೆಗಳನ್ನು ಮೈಗೂಡಿಸಿಕೊಂಡು ಸದಾಚಾರ ಪಾಲಿಸಿ ಸದ್ಧರ್ಮದ ಹಾದಿಯಲ್ಲಿ ಸಾಗಿದರೆ ಬದುಕಿನಲ್ಲಿ ಘಟಿಸುವ ಪಾಪ ಕರ್ಮಗಳನ್ನು ಮೆಟ್ಟಿ ಸನ್ಮಾರ್ಗ ಕಂಡುಕೊಳ್ಳಬಹುದು ಎಂದು ಹೊಸದುರ್ಗ ಬ್ರಹ್ಮ ವಿದ್ಯಾನಗರ ಸುಕ್ಷೇತ್ರ ಶ್ರೀ ಭಗೀರಥ ಪೀಠ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲೂಕಿನ ಕೇರಳಾಪುರದಲ್ಲಿ ಶ್ರೀ ಲಕ್ಷಿö್ಮÃದೇವಿ ದೇವಾಲಯದ ಉದ್ಘಾಟನೆ ಗೋಪುರ ಕಳಸಾರೋಹಣದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಧಾರ್ಮಿಕ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಕಾಲಚಕ್ರ ಹಾಗೂ ಯುಗ ಯುಗಾತಂರದಲ್ಲೂ ಒಳ್ಳೆಯವರು ಕೆಟ್ಟವರಿದ್ದರು ಈಗಲೂ ಇದ್ದಾರೆ. ಆದರೆ ಕಾಲ ಮಾತ್ರ ಎಲ್ಲವನ್ನೂ ಸಮನವಾಗಿ ಕಾಣುತ್ತದೆ. ಪರಿವರ್ತನೆ ನಿಮಯ ಸರಿಯಾಗಿ ಪಾಲನೆ ಆಗುತ್ತಿಲ್ಲ.
ಪ್ರಾಮಾಣಿಕತೆ ಬದಿಗೊತ್ತಿ ಸರಿದಾರಿಯಲ್ಲಿ ಸಾಗದೆ ಕಾಲವನ್ನು ದೂರುವುದು ಒಳಿತಲ್ಲ. ಮಾಡಿದ ಕರ್ಮ ಫಲದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಬದುಕಿನಲ್ಲಿ ಅನುಭವಿಸಲೇ ಬೇಕಾಗುತ್ತದೆ ಎಂದರು.
ಮಕ್ಕಳಿಗೆ ಉತ್ತಮ ಶಿಕ್ಷಣ ಸಂಸ್ಕಾರ ನೀಡಿ ಬೆಳೆಸದಿದ್ದರೆ ಭವಿಷ್ಯದಲ್ಲಿ ಅವರು ಸ್ವೇಚ್ಚಚಾರಿಗಳಾಗಿ ನಿಷ್ಪçಯೋಜಕರಾಗುವ ಪ್ರವೃತ್ತಿ ಹೆಚ್ಚುತ್ತದೆ. ಚಿಕ್ಕ ಮಕ್ಕಳ ಮೇಲೆ ಅತ್ಯಾಚಾರ ಮತ್ತು ಸಮಾಜದಲ್ಲಿ ಅನಾಚಾರಗಳು ತಪ್ಪುತ್ತಿಲ್ಲ. ಸನಾತನ ಧರ್ಮದ ಹಾದಿಯಲ್ಲಿ ಸಾಗಿ ಸತ್ಕಾರ್ಯಗಳನ್ನು ಕೈಗೊಳ್ಳುವುದರಿಂದ ಮಾನವ ಧರ್ಮ ಉನ್ನತಿ ಹೊಂದಲಿದೆ ಎಂದು ತಿಳಿಸಿದರು.
ಶಾಸಕ ಎ.ಟಿ. ರಾಮಸ್ವಾಮಿ ಮಾತನಾಡಿ, ಆಧ್ಯಾತ್ಮಿಕ ಜ್ಞಾನದ ಜ್ಯೋತಿ ಬೆಳಗದಿದ್ದರೆ ಬದುಕು ಪರಿಪೂರ್ಣವಾಗುವುದಿಲ್ಲ. ಪುಣ್ಯದ ಕಾರ್ಯಗಳಿಗೆ ಆದ್ಯತೆ ನೀಡಿದರೆ ಶಾಂತಿ ಸೌಹಾರ್ದತೆ ಗಟ್ಟಿಗೊಳ್ಳಲಿದೆ ಎಂದರು.
ತಹಸೀಲ್ದಾರ್ ಕೆ.ಆರ್. ಶ್ರೀನಿವಾಸ್, ಹಾಸನ ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ನೀಲಪ್ಪ, ಮೈಸೂರು ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ಯೋಗೇಶ್, ಅರಕಲಗೂಡು ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ವೆಂಕಟೇಶ್, ಕೆ.ಆರ್. ನಗರ ತಾಲೂಕು ಅಧ್ಯಕ್ಷ ನಟರಾಜ್, ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷೆ ಗಂಗಾಮಣಿ, ಮಾಜಿ ಅಧ್ಯಕ್ಷೆ ಯಶೋಧಮ್ಮ ಮಹಾದೇವು, ತಾಪಂ ಮಾಜಿ ಅಧ್ಯಕ್ಷ ಸಂತೋಷ್‌ಗೌಡ, ಮಾಜಿ ಸದಸ್ಯೆ ರೇಣುಕಾ ಸುರೇಶ್, ನಾಗರಾಜು ಹಾಗೂ ಉಪ್ಪಾರ ಸಮಾಜದ ಮುಖಂಡರು ಇದ್ದರು.
ದೇವಸ್ಥಾನದಲ್ಲಿ ಗುರುವಾರ ಸಂಜೆ ವಿವಿಧ ಹೋಮ, ಪೂಜೆ, ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು. ಶುಕ್ರವಾರ ಬೆಳಗ್ಗೆ ಪ್ರಾಣ ಪ್ರತಿಷ್ಠಾಪನಾ ಪ್ರಧಾನ ಹೋಮ, ಕಳಸಾಭಿಷೇಕ, ಲಕ್ಷೀದೇವಿ ಮಹಾ ಮಂಗಳಾರತಿ ಸಲ್ಲಿಸಲಾಯಿತು. ದೇವಸ್ಥಾನದಲ್ಲಿ ಅಪಾರ ಭಕ್ತರು ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿ ಧನ್ಯತಾಭಾವ ಹೊಂದಿದರು.
0 Comments