ಅರಕಲಗೂಡು : ಪಟ್ಟಣದ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಹೊನಲು ಬೆಳಕಿನ ಜೋಡೆತ್ತಿನ ಗಾಡಿ ಓಟದ ಸ್ಪರ್ಧೆ ನೋಡುಗರ ಮೈ ನವಿರೇಳಿಸಿತು.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ದಿ. ಗಿರೀಶ್ ಸ್ಮರಣಾರ್ಥ ಈ ಪಂದ್ಯಾವಳಿಯನ್ನು ಆಯೋಜಿಸಿತ್ತು. ಉದ್ಯಮಿ ಕೃಷ್ಣೇಗೌಡ ಪಂದ್ಯಾವಳಿಗೆ ಚಾಲನೆ ನೀಡಿ ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆ ಎತ್ತಿನ ಗಾಡಿ ಓಟದ ಸ್ಪರ್ಧೆಯನ್ನು ಆಯೋಜಿಸಿ ಅದರ ಸೊಬಗನ್ನು ಇಂದಿನ ಯುವ ಜನರು ಸವಿಯಲು ಅವಕಾಶ ಮಾಡಿರುವುದು ಸಂತಸದ ವಿಷಯ.
ರೈತರು ಜಾನುವಾರುಗಳ ಸಾಕಣೆಯಿಂದ ವಿಮುಖರಾಗುತ್ತಿರುವಂತೆ ರೈತರ ಮನೆಯಲ್ಲಿ ಧವಸ ಸಂಗ್ರಹಣೆಯ ಕಣಜಗಳು ಮರೆಯಾಗಿವೆ.. ಪಡಿತರ ಅಕ್ಕಿ ದೊರೆಯುತ್ತದೆ ಎಂಬ ಕಾರಣಕ್ಕೆ ದವಸ ಸಂಗ್ರಹಣೆ ನಡೆಸದಿದ್ದರೆ ಇಂದಿನ ಹವಾಮಾನ ವೈಪರಿತ್ಯದ ದಿನಗಳಲ್ಲಿ ತೊಂದರೆಗೆ ಸಿಲುಕುವ ಅಪಾಯವಿದೆ ಎಂದು ಎಚ್ಚರಿಸಿದರು.
ಕಾಂಗ್ರೆಸ್ ಮುಖಂಡ ಡಾ ದಿನೇಶ್ ಬೈರೇಗೌಡ ಇಂತಹ ಸ್ಪರ್ಧೆ ಗಳು ಸ್ಪೂರ್ತಿದಾಯಕವಾಗಿದ್ದು ಜನರಿಗೆ ಮನರಂಜನೆ ಒದಗಿಸುತ್ತವೆ ಎಂದು ಸಂತಸ ಹಂಚಿಕೊಂಡರು.
ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ಮಾತನಾಡಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷ ಬ್ಉಲ್ ಬಾಸಿತ್ ಸದಸ್ಯ ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು.
ಸಂಜೆ ಪ್ರಾರಂಭ ಗೊಂಡ ಪಂದ್ಯಾವಳಿ ಬೆಳಿಗ್ಗೆ 6 ಗಂಟೆಗೆ ಮುಕ್ತಾಯವಾಯಿತು. ಮಂಡ್ಯ, ಮೈಸೂರು, ಹುಣಸೂರು, ಚೆನ್ನರಾಯಪಟ್ಟಣ,ಹೊಳೆನರಸೀಪುರ,ಚಿಕ್ಕಮಗಳೂರು, ತರೀಕೆರೆ,ಬೀರೂರು, ಬೆಟ್ಟದಪುರ,ಕುಶಾಲನಗರ ಹಾಗೂ ಸ್ಥಳಿಯ ಸ್ವರ್ಧಿಗಳು ಸೇರಿದಂತೆ 49 ಜೊತೆ ಎತ್ತುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ರಾತ್ರಿಯಿಡೀ ನಡೆದ ಪಂದ್ಯಾವಳಿಯನ್ನು ಸಾವಿರಾರು ಮಂದಿ ವೀಕ್ಷಿಸಿ ಸಂಭ್ರಮಿಸಿದರು. ಚಿಕ್ಕಮಗಳೂರಿನ ವೀರಾಂಜನೇಯ ಸಿಕೆಎಂ ಗಗನ್ ಪ್ರಥಮ ಬಹುಮಾನ ರೂ 50 ಸಾವಿರ ಮತ್ತು ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಹುಣಸೂರಿನ ಒಡೆಯ ದೌಲತ್ ಎರಡನೆ ಬಹುಮಾನ ರೂ 30 ಸಾವಿರ ಮತ್ತು ಟ್ರೋಫಿ, ಚಿಕ್ಕಮಗಳೂರಿನ ಜೈ ಆಂಜನೇಯ ಸಿಕೆಎಂ ಜೀವನ್ ಮೂರನೆ ಬಹುಮಾನ ರೂ 20 ಸಾವಿರ ಮತ್ತು ಟ್ರೋಫಿ, ಹೊಳೆನರಸೀಪುರದ ಸಮರ್ಥ ರಾಜಾಹುಲಿ ನಾಲ್ಕನೆ ಬಹುಮಾನ ರೂ 10 ಸಾವಿರ ಮತ್ತು ಟ್ರೋಫಿ ಹಾಗೂ ಅರಕಲಗೂಡಿನ ದೊಡ್ಡಮ್ಮ ತಾಯಿ ಕೃಪೆ 5 ನೇ ಬಹುಮಾನ ರೂ5 ಸಾವಿರ ಮತ್ತು ಟ್ರೋಪೀಯನ್ನು ಪಡೆದವು.
ಸಂಘಟಕರಾದ ಬುಲೆಟ್ ರಾಜು,ರಾಮ,ಹರೀಷ್,ವೆಂಕಟ ರಾಮು,ಸಂತೋಷ್,ಕುಮಾರ್,ಉಮೇಶ್,ಧರ್ಮ,ಪವನ್ ಯಶ್ವಂತ್,ಮನು, ನಂಜುಂಡ,ಶಿವ, ಬೀರೇಗೌಡ, ರಾಮಚಂದ್ರ, ಅನಿಲ್, ವಿಜಯ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು
0 Comments