ಈ ಸಂಧರ್ಭದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿ ಪಿಂಚಣಿ ಆದೇಶದ ಪ್ರತಿ ಹಾಗೂ ಕೋವಿಡ್ ನಿಂದ ಮೃತಪಟ್ಟ ಕುಟುಂಬದವರಿಗೆ 6 ಜನಕ್ಕೆ ತಲಾ ಒಂದುಲಕ್ಷದ ಒಟ್ಟು ಆರುಲಕ್ಷ ಚೆಕ್ ವಿತರಿಸಿ ಮಾತನಾಡಿದ ಶಾಸಕ ಎ.ಟಿ.ರಾಮಸ್ವಾಮಿರವರು ಇಂದು ರಾಮನಾಥಪುರ ಹೋಬಳಿಯ 51 ಜನರಿಗೆ ಸಾಮಾಜಿಕ ಭದ್ರತೆಯಡಿ ಪಿಂಚಣಿ ಆದೇಶದ ಪ್ರತಿ ನೀಡುತಿದ್ದು
ತಹಶೀಲ್ದಾರರಿಂದ ಹಿಡಿದು ಗ್ರಾಮಲೆಕ್ಕಿಗರ ವರೆಗೆ ಕಂದಾಯ ಇಲಾಖೆ ಸಿಬ್ಬಂದಿಗಳು ಕಂದಾಯ ಇಲಾಖೆಯ ಕಾರ್ಯನಿರ್ವಹಿಸುತಿದ್ದು ಬಡವರ ರೈತರ ಹಾಗೂ ಸಾರ್ವಜನಿಕರ ಕೆಲಸಗಳನ್ನು ಗ್ರಾಮಕ್ಕೆ ತೆರಳಿ ಅವರ ಮನೆ ಬಾಗಿಲಿಗೆ ಹೋಗಿ ಅವರ ಕೆಲಸ ಮಾಡಿದಲ್ಲಿ ಆ ಜನಗಳು ನಿಮ್ಮನ್ನು ದೈವಸ್ವರೂಪದಲ್ಲಿ ಕಾಣುತ್ತಾರೆ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕೆಂದು ತಿಳಿಸಿದರು.
ತಹಸೀಲ್ದಾರ್ ಕೆ.ಆರ್.ಶ್ರೀನಿವಾಸ್ ಮಾತನಾಡಿ ನಮ್ಮ ತಾಲ್ಲೋಕಿನಲ್ಲಿ ಉತ್ತಮವಾದ ಶಾಸಕರಿದ್ದು ಅವರ ಮಾರ್ಗದರ್ಶನದಂತೆ ಪ್ರತಿಯೂಬ್ಬ ರೈತರ ಸಾರ್ವಜನಿಕರ ಕೆಲಸವನ್ನು ನಮ್ಮ ಇಲಾಖೆವತಿಯಿಂದ ಪೌತಿ ಖಾತಾ ತಿದ್ದುಪಡಿ ಪಿಂಚಣಿ .ಕೆರೆಕಟ್ಟೆ ಸ್ಮಶಾಣ ಗುಂಡುತೋಪುಗಳ ಅಳತೆ ಮಾಡಿ ಸಂರಕ್ಷಣೆ ಮಾಡಲಾಗುವುದು ರಾಮನಾಥಪುರ ಹೋಬಳಿಯ ರಾಜಸ್ವನಿರೀಕ್ಷಕರು ಹಾಗೂ ಗ್ರಾಮಲೆಕ್ಕಾಧಿಕಾರಿಗಳು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತಿದ್ದು ಅವರನ್ನು ಭೇಟಿ ನೀಡಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಭೇಕೆಂದು ತಿಳಿಸಿದರು.
ಈ ಸಂಧರ್ಭದಲ್ಲಿ ಕಾರ್ಯನಿರ್ವಾಣಾಧಿಕಾರಿ ರವಿಕುಮಾರ್.ರಾಮನಾಥಪುರ ಪಂಚಾಯಿತಿ ಅಧ್ಯಕ್ಷರಾದ ಹೇಮಲತಾ ಸಣ್ಣಸ್ವಾಮಿ ಲಕ್ಕೂರು ಗ್ರಾಮಪಂಚಾಯಿತಿ ಅಧ್ಯಕ್ಷರಾದ ಮಹೇಶ್.ಶಿರೆಸ್ತೇದಾರರಾದ ಅಂಕೇಗೌಡ.ಭಾನುಪ್ರಕಾಶ್ ಉಪತಹಶೀಲ್ದಾರ್ ರವಿ ರಾಜಸ್ವನಿರೀಕ್ಷಕರಾದ ಸಿ.ಸ್ವಾಮಿ.ಕೊಣನೂರು ರಾಜಸ್ವನಿರೀಕ್ಷಕರಾದ ಮಂಜುನಾಥ್ ಕುಣಚೂರು ಹಾಗೂ ಎಲ್ಲಾ ಪಂಚಾಯಿತಿಯ ಉಪಾಧ್ಯಕ್ಷರು ಎಲ್ಲಾ ಗ್ರಾಮಲೆಕ್ಕಿಗರು ಗ್ರಾಮಸಹಾಯಕರು ಹಾಗೂ ಗ್ರಾಮಸ್ಥರು ಹಾಜರಿದ್ದರು
0 Comments