ಅರಕಲಗೂಡು: ರಾಮನಾಥಪುರ ರಾಜಸ್ವ ನಿರೀಕ್ಷಕ ಸಿ.ಸ್ವಾಮಿ ಅವರು ಸಾವಿನ ಮನೆಗೆ ತೆರಳಿ ಅನಾಥ ಮಹಿಳೆ ಕುಟುಂಬಕ್ಕೆ ಸಹಾಯ ಹಸ್ತ ಚಾಚಿ ಮಾನವೀಯತೆ ಮೆರೆದಿದ್ದಾರೆ.
ತಾಲೂಕಿನ ರಾಮನಾಥಪುರ ಹೋಬಳಿಯ ಬಸವಾಪಟ್ಟಣ ಗ್ರಾಮದಲ್ಲಿ ಶಶಿರೇಖ ಎಂಬ ಅನಾಥೆ ನಿಧನ ಹೊಂದಿದ್ದು ಸ್ಥಳಕ್ಕೆ ರಾಜಸ್ವ ನಿರೀಕ್ಷಕ ಸಿ. ಸ್ವಾಮಿ ಅವರು ಭೇಟಿ ನೀಡಿ ಧನಸಹಾಯ ನೀಡಿ ಕರುಣೆ ವ್ಯಕ್ತಪಡಿಸಿದರು.
ಶಶಿರೇಖಾ ಎಂಬ ಅನಾಥಾ ಮಹಿಳೆ ನಿಧನ ಹೊಂದಿದ್ದು ಇವರ ಎರಡು ಹೆಣ್ಣು ಮಕ್ಕಳು ಅನಾಥಶ್ರಮದಲ್ಲಿರುವುದಾಗಿ ತಿಳಿದು ಬಂದ ಹಿನ್ನಲೆಯಲ್ಲಿ ಮೃತರ ಅಂತ್ಯ ಸಂಸ್ಕಾರ ನಡೆಸಲು ಸಹಾಯ ಹಸ್ತ ನೀಡಿ ಅಸಹಾಯಕ ಕುಟುಂಬಕ್ಕೆ ನೆರವಾದರು.
ಗ್ರಾಮಲೆಕ್ಕಾಧಿಕಾರಿ ಮಧನ್, ಗ್ರಾಪಂ ಸದಸ್ಯ ವಸಂತ ಕುಮಾರ್, ಮುಖಂಡ ಯೋಗೀಶ್, ಗ್ರಾಮ ಸಹಾಯಕ ರವಿ ಹಾಗೂ ಗ್ರಾಮಸ್ಥರು ಇದ್ದರು.
ಮುಖ್ಯಾಂಶಗಳು
ಅರಕಲಗೂಡು ತಾಲೂಕಿನ ಬಸವಾಪಟ್ಟಣದಲ್ಲಿ ಅಸುನೀಗಿದ ಅನಾಥ ಮಹಿಳೆ.
ಬಡತನದ ಬೇಗೆಯಲ್ಲಿ ಬದುಕು ಸಾಗಿಸುತ್ತಿದ್ದ ಅನಾಥೆ
ಮೃತ ಮಹಿಳೆ ಕಳೇಬರಹ ಕಾಣಲು ತೆರಳಿದ ರಾಜಸ್ವ ನಿರೀಕ್ಷಕ ಸಿ. ಸ್ವಾಮಿ.
ಮಹಿಳೆಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಅನಾಥಾಶ್ರಮಕ್ಕೆ ದೂಡಿರೋ ಸಂಗತಿ.
ಮಹಿಳೆ ಕುಟುಂಬದ ಸ್ಥಿತಿ ಕಂಡು ಮರುಗಿದ ಅಧಿಕಾರಿ
ಶವ ಸಂಸ್ಕಾರ ನಡೆಸಲು ಧನಸಹಾಯ ಮಾಡಿದ ಸಿ. ಸ್ವಾಮಿ.
ಬಡ ಕುಟುಂಬಕ್ಕೆ ಅಧಿಕಾರಿಯ ನೆರವಿನ ಹಸ್ತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸ್ಥಳೀಯರು.
0 Comments