ಮಲ್ಲಿಪಟ್ಟಣ ಕಬಡ್ಡಿ ಪಂದ್ಯಾವಳಿಯಲ್ಲಿ ರೋಚಕ ಸೆಣಸಾಟ: ಡಾ.‌ದಿನೇಶ್ ಭೈರೇಗೌಡ ಚಾಲನೆ

ಅರಕಲಗೂಡು: ಯುವಕರು ದೇಶೀಯ ಕ್ರೀಡೆಗಳಿಗೆ ಹೆಚ್ಚು ಮಹತ್ವ ನೀಡಿದರೆ ಉತ್ತಮ ಆರೋಗ್ಯ ಭಾಗ್ಯ ಕಾಪಾಡಿಕೊಳ್ಳಬಹುದು ಎಂದು ಮಕ್ಕಳ ತಜ್ಞ ಹಾಗೂ ಕಾಂಗ್ರೆಸ್ ಮುಖಂಡ ಡಾ. ದಿ‌ನೇಶ್ ಭೈರೇಗೌಡ ಸಲಹೆ ನೀಡಿದರು.

ತಾಲೂಕಿನ ಮಲ್ಲಿಪಟ್ಟಣದಲ್ಲಿ ಸೋಮವಾರ ಸಂಜೆ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಯುವಕರು ಕಬಡ್ಡಿ ಮತ್ತು ಮಹಿಳೆಯರು ಕೊಕ್ಕೊ ಮತ್ತಿತರ ದೇಶೀಯ ಕ್ರೀಡೆಗಳತ್ತ ಆಸಕ್ತಿ ವಹಿಸುವುದು ಆರೋಗ್ಯದ ಹಿತದೃಷ್ಟಿಯಿಂದ ಒಳಿತು ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ ಮಾತನಾಡಿ, ಮಲ್ಲಿಪಟ್ಟಣ ಕಬಡ್ಡಿ ಆಟಕ್ಕೆ ಐತಿಹಾಸಿಕ ಮಹತ್ವವಿದೆ. ಇಲ್ಲಿನ ಸುತ್ತಲಿನ ಹಳ್ಳಿಗಳಲ್ಲಿ ಬಹಳ ಹಿಂದಿನ ಕಾಲದಿಂದಲೂ ಕಬಡ್ಡಿ ಆಟಕ್ಜೆ ಹೆಸರಾಗಿದ್ದು ಒಂದು ಕಾಲದಲ್ಲಿ ಈ ಕ್ರೀಡೆ ಸ್ಪರ್ಧಾತ್ಮಕವಾಗಿ ಉತ್ತುಂಗತೆ ಗಳಿಸಿತ್ತು.
ಕಾಲಾನಂತರದ ಆಧುಕತೆ ಭರಾಟೆಯಲ್ಲಿ ಈ ಭಾಗದಲ್ಲಿ ನಶಿಸುತ್ತಿದ್ದ‌ ದೇಶೀಯ ಕ್ರೀಡೆಗಳತ್ತ ಗ್ರಾಮೀಣ ಪ್ರದೇಶದ ಯುವಕರು ಇದೀಗ ಅತೀವ ಆಸಕ್ತಿ ವಹಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಕ್ರೀಡಾಪಟುಗಳು ಸೋಲು- ಗೆಲುವನ್ನು ಸಮಾ‌ನವಾಗಿ ಸ್ವೀಕರಿಸಿ ಸ್ಪರ್ಧಾ ಮನೋಭಾವದಿಂದ ಆಟವಾಡಬೇಕು ಎಂದು ಕಿವಿಮಾತು ಹೇಳಿದರು.

ಡಾ. ವಿಶ್ವನಾಥ್, ಕಾಫಿ ಬೆಳೆಗಾರ ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಕೃಷ್ಣೇಗೌಡ, ಶಾಬಾಜ್, ಜಮೀರ್, ಆಟೋ ಚಾಲಕರ ಸಂಘದ ಪುಟ್ಟರಾಜು ಕರವೇ ಮುಖಂಡ ಜಿಮ್ ಸೋಮು ಮಾತನಾಡಿದರು. ಗ್ರಾಪಂ ಸದಸ್ಯರಾದ ಸುಮಿತ್ರಮ್ಮ, ಯಶೋಧ, ಪೂಜಾ, ನಾಗರಾಜು, ಮುಖಂಡರಾದ ರಾಜೇಗೌಡ, ಕೆಂಚಪ್ಪ, ಮದಲಾಪುರ ಮಂಜು, ಗೋಪಿನಾಥ್ ಇತರರಿದ್ದರು.
ಪಂದ್ಯಾವಳಿಯಲ್ಲಿ 26 ತಂಡಗಳು ಪಾಲ್ಗೊಂಡಿದ್ದು ಗೆಲುವಿಗಾಗಿ ರೋಚಕ ಸೆಣಸಾಟ ನಡೆಸಿದವು.

Post a Comment

0 Comments