ಅರಕಲಗೂಡು: ಎಲ್ಲ ಮಕ್ಕಳು ಕೋವಿಡ್ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕರೊನಾ ಸೋಂಕಿನಿAದ ರಕ್ಷಣೆ ಪಡೆದುಕೊಳ್ಳಬೇಕು ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕಾಂತಾಮಣಿ ತಿಳಿಸಿದರು.

ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ 15ರಿಂದ 18 ವರ್ಷ ವಯೋಮಾನದ ವಿದ್ಯಾರ್ಥಿಗಳಿಗೆ ಕರೊನಾ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಲಸಿಕೆ ಪಡೆದ ನಂತರವೂ ಕೋವಿಡ್ ನಿಮಯಗಳನ್ನು ಪಾಲಿಸಬೇಕು. ಎಲ್ಲರೂ ದೂರವಾಣಿ ಸಂಖ್ಯೆ ಹಆಗೂ ಗುರುತಿನ ಚೀಟಿ ತರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಬಸವರಾಜ್ ಮಾತನಾಡಿ, ಮಕ್ಕಳು ಯಾವುದೇ ಭೀತಿ ಇಟ್ಟುಕೊಳ್ಳದೆ ಲಸಿಕೆ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಡಾ. ಧನಪಾಲ್, ಆರೋಗ್ಯ ನಿರೀಕ್ಷಕರಾದ ಚಂದ್ರೇಗೌಡ, ಮೀನಾಕ್ಷಿ, ಸಿಬ್ಬಂದಿ ಇದ್ದರು.