ಕ್ರೀಡೆಯಷ್ಟೇ ಆರೋಗ್ಯದ ಕಾಳಜಿ ಅತ್ಯವಶ್ಯ: ಡಾ.‌ದಿನೇಶ್ ಭೈರೇಗೌಡ

ಅರಕಲಗೂಡು: ಮನುಷ್ಯ ಉನ್ನತ ಚಿಂತನೆಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ದುಷ್ಚಟಗಳಿಂದ ದೂರವುಳಿದು ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಕಾಂಗ್ರೆಸ್ ಮುಖಂಡ ಡಾ. ದಿನೇಶ್ ಭೈರೇಗೌಡ ತಿಳಿಸಿದರು.

ತಾಲೂಕಿನ ಬಸವಾಪಟ್ಟಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಆರೋಗ್ಯ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ನಿಗದಿತ ಅವಧಿಯಲ್ಲಿ ಪ್ರತಿಯೊಬ್ಬರು ಅರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಉತ್ತಮ ತರಕಾರಿ ಹಣ್ಣುಗಳನ್ನು ಸೇವಿಸಬೇಕು. ಧೂಮಪಾನ ಮಧ್ಯಪಾನಗಳಿಂದ ದೂರವಿರಬೇಕು ಎಂದರು.
ಡಾ. ಮಧು ಮಾತನಾಡಿ, ಮಧುಮೇಹ ಮತ್ತು ರಕ್ತದ ಒತ್ತಡ ಇರುವವರು ಅರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಔಷಧಿ ಮಾತ್ರೆಗಳನ್ನು ನಿಲ್ಲಿಸಬಾರದು, ವರ್ಷಕ್ಕೆ 2 ಬಾರಿಯಾದರೂ ದೈಹಿಕ ಮತ್ತು ಎಲ್ಲಾ ರೀತಿಯ ಪರೀಕ್ಷೆಗಳನ್ನು ಪ್ರಮುಖವಾಗಿ ಇ.ಸಿ.ಜಿ, ಬಿ.ಪಿ, ಮಧುಮೇಹ ಇತ್ಯಾದಿ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು ಎಂದರು.
ಹೃದಯ ತಜ್ಞ ಡಾ. ಅಶಿಕ ಮಾತನಾಡಿ, ಯುವಕರು ಅರೋಗ್ಯವಂತ ಹೃದಯ ಹೊಂದಲು ಅನುಸರಿಸಬೇಕಾದ ವಿಧಾನಗಳ ಕುರಿತು ವಿವರಿಸಿದರು.

ಡಾ. ಸಿದ್ದರಾಮ, ಡಾ. ಬೃಂದಾ, ಡಾ. ಮಧುರ, ಡಾ. ಸುಮಾ, ಮುಖಂಡ ಕೃಷ್ಣೇಗೌಡ. ಚೇತನ, ವೇಣು ಇತರರಿದ್ದರು. ಇದಕ್ಕೂ ಮುನ್ನ ಕ್ರೀಡಾಪಟುಗಳು ಊರಿನ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸಿ ಗಮನ ಸೆಳೆದರು.

Post a Comment

0 Comments