ಅಪರಾಧ ತಡೆಗೆ ಸಾರ್ವಜನಿಕ ಸಹಭಾಗಿತ್ವ ಮುಖ್ಯ: ಪ್ರೊಬೆಷನರಿ ಡಿವೈಎಸ್ಪೆ ದ್ವಾರಿಕಾ

ಅರಕಲಗೂಡು: ಪಟ್ಟಣದ ಅನಕೃ ವೃತ್ತದಲ್ಲಿ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಬೀದಿ ನಾಟಕ ಪ್ರದರ್ಶನ ನಡೆಯಿತು.

ಪ್ರೊಪೆಷನರಿ ಡಿವೈಎಸ್ಪಿ ದ್ವಾರಿಕಾ ಮಾತನಾಡಿ, ಸಂಚಾರ ನಿಯಮಗಳನ್ನು ಪಾಲಿಸದಿದ್ದರೆ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ. ದ್ವಿಚಕ್ರ ಚಾಲಕರು ಮದ್ಯಪಾನ ಮಾಡಿ ಹೆಲ್ಮೇಟ್ ಧರಿಸದೆ ವಾಹನ ಚಲಾಯಿಸುತ್ತಿದ್ದು ಇದರ ಪರಿಣಾಮವಾಗಿ ಇತ್ತೀಚಿನ ದಿನಗಳಲ್ಲಿ ಕಡಿಮೆ ವಯೋಮಾನದ ಯುವಕರು ಅಪಘಾತಕ್ಕೊಳಗಾಗಿ ಮೃತಪಡುತ್ತಿದ್ದಾರೆ. ಪೋಷಕರು ಎಚ್ಚೆತ್ತು ತಮ್ಮ ಮಕ್ಕಳಿಗೆ ಚಾಲನ ಪರವಾನಗಿ ಕೊಡಿಸಿದ ನಂತರ ದ್ವಿಚಕ್ರ ವಾಹನಗಳನ್ನು ನೀಡುವುದು ಒಳಿತು. ಕಡ್ಡಾಯವಾಗಿ ಹೆಲ್ಮೇಟ್ ಧರಿಸಬೇಕು ಎಂದರು.

ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರು ಬೆಲೆ ಬಾಳುವ ಆಭರಣಗಳನ್ನು ಪ್ರದರ್ಶಿಸಬಾರದು. ಇದರಿಂದ ಕಳ್ಳತನ ತಡೆಯಬಹುದಾಗಿದೆ. ಮನೆಯಿಂದ ಬಹಳ ದಿನಗಳವರೆಗೆ ಹೊರಗುಳಿಯುವ ಮುನ್ನ ಠಾಣೆಗೆ ಬಂದು ಮಾಹಿತಿ ನೀಡಿದರೆ ಬೀಟ್ ಸಿಬ್ಬಂದಿ ಗಸ್ತು ತಿರುಗುವುದನ್ನು ಹೆಚ್ಚಿಸಲಾಗುವುದು. ಬೆಲೆ ಬಾಳುವ ಒಡವೆಗಳನ್ನು ಮನೆಯಲ್ಲಿ ಇರಿಸದೆ ಬ್ಯಾಂಕ್‌ಗಳಲ್ಲಿ ಇಡುವುದು ಸುರಕ್ಷಿತವಾದ ಕ್ರಮವಾಗಿದೆ ಎಂದು ತಿಳಿಸಿದರು.
ಸಬ್ ಇನ್ಸ್ಪೆಕ್ಟರ್ ಮಾಲಾ ಕಂಜಿರ ಧಮಡಿ ಬಾರಿಸುವ ಮೂಲಕ ಬೀದಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿದರು.

Post a Comment

0 Comments