ರಾಮನಾಥಪುರ ವ್ಯಾಸಾಂಜನೇಯ ನೆಲದಲ್ಲಿ ಅದ್ದೂರಿತನ ಮೆರೆದ ಹನುಮ ಜಯಂತಿ!

ಅರಕಲಗೂಡು: ತಾಲೂಕಿನ ರಾಮನಾಥಪುರದಲ್ಲಿ ಕಣ್ಣರಳಿಸಿ ಕಾಣುವಷ್ಟು  ಯಶಸ್ವಿಯಾಗಿ ಹನುಮ ಜಯಂತಿಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ಶ್ರೀ ರಾಮ ಸೇನೆ ವತಿಯಿಂದ ಹಮ್ಮಿಕೊಂಡಿದ್ದ ಮೊದಲನೇ ವರ್ಷದ ವೈಭವೋಪೇತ ಹನುಮ ಜಯಂತಿ ಸಡಗರ ಪಟ್ಟಣದಲ್ಲಿ ಕಳೆಗಟ್ಟಿತ್ತು. ಅಂಜನೇಯಸ್ವಾಮಿ ಅಂಲಕೃತ ಮೂರ್ತಿ ಹೊತ್ತು ಉತ್ಸವ ರಾಜ ಬೀದಿಯಲ್ಲಿ ಸಾಗಿತು.
ಹನುಮಂತನ ವೇಷಧಾರಿ ನಡಿಗೆ ಗಮನ ಸೆಳೆಯಿತು. ಹನುಮ ಜಯಂತಿ ಉತ್ಸವದಲ್ಲಿ ಅಪ್ಪು ಭಾವಚಿತ್ರ ರಾರಾಜಿಸಿತು. ಮೆರವಣಿಗೆ ವೇಳೆ ಚಿತ್ರನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಭಾವಚಿತ್ರ ಹಿಡಿದು ಕುಣಿದು ಕುಪ್ಪಳಿಸಿ ಯುವಕರ ಪಡೆ ಸಂಭ್ರಮಿಸಿತು.
ಸಿನಿಮಾದ ಡಿಜೆ ಹಾಡುಗಳಿಗೆ ಹೆಜ್ಜೆ ಹಾಕಿ ಅಪ್ಪು ಅಭಿಮಾನಿಗಳು ಅಭಿಮಾನ ಮೆರೆದರು.
ಮೆರವಣಿಗೆಯುದ್ದಕ್ಕೂ ಅಲ್ಲಲ್ಲಿ ಸಾರ್ವಜನಿಕರಿಗೆ ಪ್ರಸಾದ ರೂಪದಲ್ಲಿ ಉಪಹಾರ ವಿತರಿಸಲಾಯಿತು.
ಕಾವೇರಿ ನದಿ ದಂಡೆ ಮೇಲಿರುವ ವ್ಯಾಸಾಂಜನೇಯ ಸ್ವಾಮಿ ದೇವಸ್ಥಾನವನ್ನು ಹೂವಿನಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಅಪಾರ ಭಕ್ತರ ದೇವರ ದರ್ಶನ ಪಡೆದರು.

Post a Comment

0 Comments