ಜ.1ರಿಂದ 4 ತನಕ ಕ್ರಿಕಿಟ್, ಕಬಡ್ಡಿ, ಬೃಹತ್ ಆರೋಗ್ಯ ಮೇಳ: ಡಾ. ದಿನೇಶ್ ಭೈರೇಗೌಡ ಮಾಹಿತಿ

ಅರಕಲಗೂಡು: ಕ್ಷೇತ್ರದ ರಾಜಕಾರಣದಲ್ಲಿ ತೊಡಗಿಕೊಂಡ ತರುವಾಯ ಡಾ. ದಿನೇಶ್ ಭೈರೇಗೌಡ ಅವರು ವಿವಿಧ ಜನಪರ ಸೇವಾ ಮಾರ್ಗಗಳನ್ನು ಸರಣಿಯಾಗಿ ಆಯೋಜಿಸುತ್ತಿದ್ದಾರೆ. ಇದೀಗ ತಾಲೂಕಿನಲ್ಲಿ ಜ.1ರಿಂದ 4ವರೆಗೆ ಇನ್ಮಷ್ಟು ಮಹತ್ವದ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಡಾ. ದಿನೇಶ್ ಭೈರೇಗೌಡ ತಿಳಿಸಿದರು.

ಬಸವಾಪಟ್ಟಣದಲ್ಲಿ ಜ. 1ರಂದು ಗೇಮ್ಸ್ ಸಿಂರ‍್ಸ್ ಕ್ರಿಕೆರ‍್ಸ್ ಚಾಂಪಿಯನ್ ಲೀಗ್ ಡಾ. ದಿನೇಶ್ ಭೈರೇಗೌಡ ಕಪ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಲಾಗುವುದು. ಜ. 2ರಂದು ನಡೆಯುವ ಬೃಹತ್ ಆರೋಗ್ಯ ಮೇಳದಲ್ಲಿ ಉಚಿತವಾಗಿ ಹೃದ್ರೋಗ, ದಂತ ಚಿಕಿತ್ಸೆ, ಗರ್ಭಿಣಿಯರು, ಮಕ್ಕಳು ಸೇರಿದಂತೆ ಎಲ್ಲ ರೀತಿಯ ಕಾಯಿಲೆಗಳಿಗೆ ತಜ್ಞ ವೈದ್ಯರಿಂದ ಆರೋಗ್ಯ ಪರೀಕ್ಷೆ ನಡೆಸಲಾಗುವುದು.

ಕಣ್ಣು ತಪಾಸಣೆ ನಡೆಸಿ ದೃಷ್ಟಿ ದೋಷ ಇರುವವರಿಗೆ ಉಚಿತವಾಗಿ ಹಾಸನ ಆಸ್ಪತ್ರೆಯಲ್ಲಿ ಶಸ್ತç ಚಿಕಿತ್ಸೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ನೇತ್ರದಾನ ಮಾಡುವವರು ಹೆಸರು ನೋಂದಾಯಿಸಬಹುದು. 

ಮಲ್ಲಿಪಟ್ಟಣದಲ್ಲಿ ಜ. 3ರಂದು ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ ನಡೆಯಲಿದೆ. ಪಂದ್ಯಾವಳಿಯಲ್ಲಿ ತಾಲೂಕಿನ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ. ಡಿ. 4ರಂದು ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭ ಜರುಗಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕಳೆದ ಎರಡು ವರ್ಷಗಳಿಂದ ಕೋವಿಡ್ ಸಮಯದಲ್ಲಿ ಕಷ್ಟದಲ್ಲಿರುವ ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗಿದೆ. ಆಹಾರ ಕಿಟ್ ಹಾಗೂ ಮಾಸ್ಕ್ಗಳು, ಥರ್ಮಲ್ ಸ್ಕಾö್ಯನರ್, ಪಲ್ಸ್ಆಕ್ಸಿಮೀಟರ್ ಉಪಕರಣಗಳನ್ನು ಉಚಿತವಾಗಿ ನೀಡಲಾಗಿದೆ. ಕೊಣನೂರಿನಲ್ಲಿ ಬೃಹತ್ ಆರೋಗ್ಯ ಮೇಳೆ ನಡೆಸಲಾಗಿದೆ ಎಂದರು.

ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಘಟನೆಗೆ ಹೆಚ್ಚು ಒತ್ತು ನೀಡಲಾಗಿದೆ. ಪಕ್ಷಕ್ಕೆ ಯಾರೇ ಬಂದರೂ ಸ್ವಾಗತಿಸಲಾಗುವುದು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಾನು ಪ್ರಬಲ ಆಕಾಂಕ್ಷಿ. ಟಿಕೆಟ್ ನೀಡುವುದು ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ಹೇಳಿದರು.

ಪಪಂ ಸದಸ್ಯ ಸುಬಾನ್ ಷರೀಪ್ ಮಾತನಾಡಿ, ಡಾ.‌ದಿನೇಶ್ ಭೈರೇಗೌಡ ಅವರ ಜನಪರ ಕಾರ್ಯಗಳನ್ನು ಪಕ್ಷದ ರಾಜ್ಯ ನಾಯಕರು ಗುರುತಿಸಬೇಕು ಎಂದು ವಿನಂತಿಸಿದರು.

ಕಾಂಗ್ರೆಸ್ ಮೀಡಿಯಾ ಜಿಲ್ಲಾ ಕಾರ್ಯದರ್ಶಿ ಮಧು ಮಾತನಾಡಿ, ಡಾ. ದಿನೇಶ್ ಭೈರೇಗೌಡ ಅವರ ಹುಟ್ಟು ಹಬ್ಬದ ಅಂಗವಾಗಿ ತಾಲೂಕಿನ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಪತ್ರಕರ್ತರು ಕೇಳಿದ ಪ್ರಶ್ನಗೆ ಎಂ.ಟಿ. ಕೃಷ್ಣೇಗೌಡರು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಸಹ ಪಡೆದಿಲ್ಲ, ಆದರೆ ಪಕ್ಷವು ಯಾರೇ ಬಂದರೂ ಸ್ವಾಗತಿಸುತ್ತದೆ ಎನ್ನುವ ವಿಚಾರವೂ ಪ್ರಸ್ತಾಪವಾಯಿತು.

Post a Comment

0 Comments