ಅರಕಲಗೂಡು: ಪಟ್ಟಣ ವ್ಯಾಪ್ತಿಯಲ್ಲಿ ಪರಿಶಿಷ್ಟರು ವಾಸಿಸುವ ಪ್ರದೇಶಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು 6 ಕೋಟಿ ರೂ ಅನುದಾನ ಕೋರಲಾಗಿದೆ ಎಂದು ಪಪಂ ಅಧ್ಯಕ್ಷ ಹೂವಣ್ಣ ತಿಳಿಸಿದರು.
ಪಟ್ಟಣದ ಸಮಗ್ರ ಅಭಿವೃದ್ಧಿಗೆ ಅನುದಾನದ ಕೊರತೆ ಎದುರಾಗಿದೆ. ಹೀಗಾಗಿ ಶಾಸಕರು ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಅನುದಾನ ಖರ್ಚಾಗದೆ ಉಳಿದಿರುವ ಅನುದಾನವನ್ನು ಕೋರಿದ್ದಾರೆ.
ಪಟ್ಟಣ ವ್ಯಾಪ್ತಿಯಲ್ಲಿ ಪರಿಶಿಷ್ಟರು ನೆಲೆಸಿರುವ ಭಂಗಿತಿಮ್ಮನಕೊಪ್ಪಲು, ಜಡಿಯನ ಕೊಪ್ಪಲು, ಅರವತ್ತಿಗೆತಿಟ್ಟ, ಬಾಳಯ್ಯನ ಕೊಪ್ಪಲು ರಸ್ತೆ ಹಾಗೂ ಭಂಗಿತಿಮ್ಮನಕೊಪ್ಪಲು, ಅರವತ್ತಿಗೆ ತಿಟ್ಟ ಆಶ್ರಯ ಬಡಾವಣೆಗಳ ಅಡ್ಡರಸ್ತೆಗಳ ಅಭಿವೃದ್ಧಿ ಮತ್ತು ಚರಂಡಿ ಕಾಮಗಾರಿಗೆ 3 ಕೋಟಿ ರೂ ಹಾಗೂ
ಕೆಲ್ಲೂರು, ಪೇಟೆಮಾಚಗೌಡನಹಳ್ಳಿ, ಜೈಭೀಮ್ ನಗರ, ಪೌರ ಕಾರ್ಮಿಕರ ಕಾಲನಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೆ 2 ಕೋಟಿ ರೂ ಮತ್ತು ಹಂಪಾಪುರ ಕಾಲನಿ, ಮಂಡಿಕೇರಿ, ಗುಡ್ಡನಕೊಪ್ಪಲು, ಎಡಿ ಕಾಲಿ, ಸುಭಾಷ್ ನಗರ ರಸ್ತೆಗಳ ಅಭಿವೃದ್ಧಿ ಮತ್ತು ಚರಂಡಿ ಕಾಮಗಾರಿ ನಿರ್ವಹಿಸಲು 1 ಕೋಟಿ ರೂ ಅನುದಾನ ಕೋರಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
0 Comments