ಹೊಳೆನರಸೀಪುರ ಶಾಸಕರನ್ನು ಬದಲಾವಣೆ ಮಾಡುವಂತೆ ಕೋರಿ : ಹಾಸನಾಂಬ ತಾಯಿಗೆ ಭಕ್ತನಿಂದ ಪತ್ರ...

ಹಾಸನ : ಜಿಲ್ಲೆಯ ಹೊಳೆನರಸೀಪುರ ಕ್ಷೇತ್ರದ ಶಾಸಕರು ಬದಲಾಗಬೇಕು ಆ ರೀತಿಯಾಗಿ ಹಾಸನಂಬ ತಾಯಿಯು ಆಶೀರ್ವದಿಸಲಿ ಎಂದು ಹಾಸನಾಂಬ ತಾಯಿಯ ಭಕ್ತರೊಬ್ಬರು ಪತ್ರದ ಮುಖೇನ ಹಾಸನಾಂಬೆಗೆ ತಮ್ಮ ಹರಕೆಯನ್ನು ಸಲ್ಲಿಸಿದ್ದಾರೆ.

 ಹಾಸನಾಂಬ ದೇವಾಲಯದ ಹುಂಡಿ ಹಣ ಎಣಿಕೆ ಕಾರ್ಯ ಇಂದು ನಡೆದಿದ್ದು ಹಣ ಎಣಿಕೆ ಮಾಡುವ ಸಂದರ್ಭದಲ್ಲಿ ಅನಾಮಧೇಯ ಪತ್ರವೊಂದು ದೊರೆತಿದೆ ಆ ಪತ್ರದಲ್ಲಿ, ಹಾಸನಾಂಬ ತಾಯಿ ನಿನ್ನೆ ಕೃಪೆಯಿಂದ ಹೊಳೆನರಸೀಪುರದ ಶಾಸಕರು ಬದಲಾಗಬೇಕು ಸದ್ಯ ಕ್ಷೇತ್ರದಲ್ಲಿರುವ ಶಾಸಕ ಹೆಚ್ ಡಿ ರೇವಣ್ಣನವರ ಕುಟುಂಬದ ಸದಸ್ಯರೆಲ್ಲರೂ ಜನರ ಪ್ರಾಣ ಹಿಂಡುತ್ತಿದ್ದಾರೆ ಕ್ಷೇತ್ರದಲ್ಲಿ ಯಾವೊಬ್ಬ ವ್ಯಕ್ತಿಯೂ ಮುಂದೆ ಬರಲು ಬಿಡುತ್ತಿಲ್ಲ  ಮುಂದಿನ ಚುನಾವಣೆಯಲ್ಲಿ ಅವರ ಕುಟುಂಬದ ಎಲ್ಲಾ ಸದಸ್ಯರನ್ನು ಸೋಲಿಸು ಹಾಗೂ ಹೊಳೆನರಸೀಪುರ ಜನತೆಗೆ ಒಳ್ಳೇದು ಮಾಡುತ್ತಿದೆ ಎಂದು ಪತ್ರ ಬರೆದಿದ್ದಾರೆ..
 ಈ ರೀತಿಯ ಅನಾಮಧೇಯ ಪತ್ರ ದೊರಕಿತ್ತು ಬಹಳ ಆಶ್ಚರ್ಯಕರ ಸಂಗತಿಯಾಗಿದ್ದು ಈ ಪತ್ರದ ವಿಚಾರವಾಗಿ ಕ್ಷೇತ್ರದ ಶಾಸಕರಾದ ಎಚ್ ಡಿ ರೇವಣ್ಣ ಏನು ಪ್ರತಿಕ್ರಿಯಿಸುತ್ತಾರೆಂದು ಕಾದುನೋಡಬೇಕಿದೆ...

ಸಂಪಾದಕ - ರವಿ

Post a Comment

0 Comments