ಅಡಕೆ ಕದಿಯಲು ಮರವನ್ನೇ ಕಡಿದ ಕಳ್ಳರು!

ಅಡಕೆ ಧಾರಣೆ ಗರಿಷ್ಠ ಮಟ್ಟ ತಲುಪಿರುವ ಬೆನ್ನಲೆ ಅಡಕೆ ಕದಿಯುವ ಕಳ್ಳತ ಕೈಚಳಕದ ಕೃತ್ಯ  ಕೂಡು ಬೆಳೆಗಾರರ ತಲೆ ಸುತ್ತುವಂತೆ ಮಾಡುತ್ತಿದೆ. ಈ ಬಗ್ಗೆ ರಾಜ್ಯದ ಹಲವೆಡೆ ಪ್ರಕರಣಗಳು ವರದಿಯಾಗುತ್ತಿದ್ದು ಇದೀಗ ಸಕಲೇಶಪುರದಲ್ಲಿ ಅಡಿಕೆ ಕದಿಯಲು ಮರವನ್ನೇ ಕಡಿದ ಕಳ್ಳರು!!

ಸಕಲೇಶಪುರ ಪಟ್ಟಣ ಹೊರವಲಯದ ರೈಲ್ವೆ ಸೇತುವೆ ಸಮೀಪ ಮರಗಳನ್ನೇ ಕತ್ತರಿಸಿ ಅಡಿಕೆ ಕಳವು

ಸುಬ್ರಹ್ಮಣ್ಯ ಎಂಬ ಶಿಕ್ಷಕರಿಗೆ ಸೇರಿದ ತೋಟದಲ್ಲಿ ಘಟನೆ.
ಮೂರು ಎಕರೆ ಪ್ರದೇಶದಲ್ಲಿ  ಕಾಫಿ ಹಾಗೂ ಅಡಿಕೆ ತೋಟ ಮಾಡಿರುವ ಶಿಕ್ಷಕ ಬುಧವಾರ ರಾತ್ರಿ ದುಷ್ಕರ್ಮಿಗಳು, ಮಾನವೀಯತೆ ಮರೆತು ಬೆಳೆದು ನಿಂತಿದ್ದ 15 ಅಡಿಕೆ ಮರಗಳನ್ನು ಕತ್ತರಿಸಿ ಅಡಿಕೆ ಕದ್ದೊಯ್ದಿದ್ದಾರೆ.

ಸಕಲೇಶಪುರ ಪಟ್ಟಣ ಠಾಣೆ ಪೊಲೀಸರಿಂದ ಪರಿಶೀಲನೆ ನಡೆಸಿದರು.

Post a Comment

0 Comments