ಅರಕಲಗೂಡು: ನಾದ ಬ್ರಹ್ಮ ಹಂಸಲೇಖ ಅವರನ್ನು ಬೆಂಬಲಿಸಿ ದಲಿತಪರ ಸಂಘಟನೆಗಳ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರದಿAದ ಇತ್ತೀಚೆಗೆ ಆರಂಭಗೊAಡ ಪಂಜಿನ ಮೆರವಣಿಗೆ ಅನಕೃ ವೃತ್ತ ಮೂಲಕ ಹೊರತಟು ಅಂಬೇಡ್ಕರ್ ಪ್ರತಿಮೆ ಬಳಿ ಮಕ್ತಾಯಗೊಳಿಸಿದರು.
ಛಲವಾದಿ ಮಹಾಸಭ ಅಧ್ಯಕ್ಷ ಲಿಂಗರಾಜು ಮಾತನಾಡಿ, ಹಂಸಲೇಖ ಅವರು ನಾಡಿನ ಶ್ರೇಷ್ಠ ಸಂಗೀತ ನಿರ್ದೇಶಕರು, ಚಿತ್ರ ಸಾಹಿತಿ ಹಾಗೂ ಸಮಾಜಮುಖಿ ಚಿಂತಕರು ಕೂಡ ಆಗಿದ್ದಾರೆ. ದಲಿತರ ಆಹಾರ ಪದ್ಧತಿಗಳನ್ನು ವೇದಿಕೆಯಲ್ಲಿ ಹೇಳಿಕೊಂಡಿದ್ದಾರೆ. ಕೇವಲ ದಲಿತರ ಕೇರಿಗಳಿಗೆ ಪಾದಯಾತ್ರೆ, ಮನೆಯಲ್ಲಿ ವಾಸ್ತವ್ಯ ಹೂಡುವುದರಿಂದ ದಲಿತರ ಸಾಮಾಜಿಕ ಬದುಕು ಬದಲಾಗುವುದಿಲ್ಲ. ಅವರ ಆಚಾರ ವಿಚಾರಗಳಲ್ಲಿ ಬೆರೆತು, ಆಹಾರ ಸೇವನೆಯನ್ನು ಮಾಡಿದಾಗ ಮಾತ್ರ ಸಾಮಾಜಿಕ ಸಮಾನತೆಯನ್ನು ಕಾಣಬಹುದಾಗಿದೆ ಎಂಬ ವಾಸ್ತವತೆಯ ವಿಷಯನ್ನು ಮಂಡಿಸಿದ್ದಾರೆ.
ಇದನ್ನು ಕೆಲವರು ಸಹಿಸಲಾಗದೇ ಹಂಸಲೇಖ ವಿರುದ್ಧ ದೂರು ನೀಡಿರುವುದು ಖಂಡನೀಯವಾಗಿದೆ ಎಂದರು.
ಕೂಡಲೇ ಹಂಸಲೇಖ ವಿರುದ್ಧ ದೂರು ನೀಡಿರುವವರು ಕ್ಷಮೆ ಕೇಳಬೇಕು. ದಲಿತರ ಪರವಾಗಿ ಕೇವಲ ಸುಳ್ಳು ಹೇಳಿಕೆ ನೀಡುವುದನ್ನು ಬಿಡಬೇಕು. ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ಪೊಲೀಸರು ನಿಲ್ಲಿಸಲು ಹೆಚ್ಚಿನ ಗಮನಹರಿಸಬೇಕು ಎಂದು ಅವರು ಆಗ್ರಹಿಸಿದರು.
ದಲಿತ ಸಂಘಟನೆಗಳ ಮುಖಂಡರು, ವಿದ್ಯಾರ್ಥಿ ಸಂಘದ ಪ್ರಮುಖರು ಪಾಲ್ಗೊಂಡಿದ್ದರು.
0 Comments