ಅರಕಲಗೂಡು: ಬ್ರಾಹ್ಮಣ ಸಮುದಾಯ ಭವನದ ಲೋಕಾರ್ಪಣೆ ಕಾರ್ಯಕ್ಕೆ ಆಗಮಿಸಿ ಪಟ್ಟಣದಲ್ಲಿ ವಾಸ್ತವ್ಯ ನಡೆಸಿದ್ದ ಶಕಟಪುರದ ಕೃಷ್ಣಾನಂದ ತೀರ್ಥ ಸ್ವಾಮೀಜಿಗಳಿಗೆ ಭಕ್ತರು ಹೃದಯ ಸ್ಪರ್ಷಿ ಬೀಳ್ಕೊಡುಗೆ ನೀಡಿದರು.
ಪುರಾಣ ಪ್ರಸಿದ್ದ ಅಮೃತೇಶ್ವರ ಸ್ವಾಮಿ ದೇವಾಲಯಕ್ಕೆ ಇತ್ತೀಚೆಗೆ ಭೇಟಿ ನೀಡಿ ದೇವರ ದರ್ಶನ ಪಡೆದ ಸ್ವಾಮೀಜಿಗಳು ಶಂಕರಾಚಾರ್ಯ ಅವರು, ಕೋದಂಡರಾಮ, ನವಗ್ರಹ, ಅಮೃತೇಶ್ವರ ಸ್ವಾಮಿ, ಪಾರ್ವತಿ, ಹಾಗೂ ಸಂಕಷ್ಟಹರ ಗಣಪತಿ ದೇವತೆಗಳಿಗೆ ಮಂಗಳಾರತಿ ನೆರವೇರಿಸಿದರು.
ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ಜಯಘೋಷ ಮಾಡಿದರು. ಸ್ವಾಮೀಜಿಗಳು ತಮ್ಮ ಪರಿವಾರದೊಂದಿಗೆ ಶಕಟಪುರಕ್ಕೆ ವಾಪಸ್ಸಾದರು.
ಬ್ರಾಹ್ಮಣ ಸಮಾಜದ ಮುಖಂಡರಾದ ಎ.ಎಸ್. ರಾಮಸ್ವಾಮಿ, ಎ.ಎನ್. ಗಣೇಶಮೂರ್ತಿ, ಎ.ಎಸ್. ಹಿರಿಯಣ್ಣಯ್ಯ, ಕೆ. ನಂಜುAಡಸ್ವಾಮಿ, ರಾಮಕೃಷ್ಣಯ್ಯ, ಚಿದಂಬರ ಬಾಬು, ಎಚ್.ಜಿ. ರಮೇಶ್, ಕೆ.ವಿ. ಸೋಮಶೇಖರ್ ಹಾಗೂ ವಿಪ್ರ ಮಹಿಳಾ ಬಳಗದ ಸದಸ್ಯರು ಉಪಸ್ಥಿತಲರಿದ್ದರು.
ಪ್ರತಿಷ್ಠಾಪನಾ ದಿನ ಆಚರಣೆ: ಪಟ್ಟಣದ ಕೋಟೆ ಕೋದಂಡರಾಮ ದೇವರ 55 ನೇ ಪ್ರತಿಷ್ಠಾಪನಾ ದಿನವನ್ನು ಆಚರಿಸಲಾಯಿತು. ದೇವಾಲಯದಲಿ ದೇವರಿಗೆ ಪಂಚಾಮೃತ ಅಭಿಷೇಕ, ಪೂಜೆ ಮತ್ತು ಮಹಾ ಮಂಗಳಾರತಿ ನಡೆಸಲಾಯಿತು. ಸಾಮೂಹಿಕ ಭಜನೆ ಹಾಗೂ ಪುಜಾ ಕಾರ್ಯಗಳು ನಡೆದವು. ಅರ್ಚಕ ಮಂಜುನಾಥ್ ಭಟ್ ಪೂಕಾ ಕಾರ್ಯ ನಡೆಸಿದರು. ಭಕ್ತರು ದೇವಾಲಯಕ್ಕೆ ತೆರಳಿ ದೇವರ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು.
0 Comments