ಅರಸೀಕಟ್ಟೆಯಮ್ಮ ದೇವಸ್ಥಾನ ವಿವಿಧ ಮಠಾಧೀಶರ‌ ಸಮ್ಮುಖ ಉದ್ಘಾಟನೆ

ಅರಕಲಗೂಡು: ತಾಲೂಕಿನ ಅರಸೀಕಟ್ಟೆಯಮ್ಮ ಕ್ಷೇತ್ರದಲ್ಲಿ ನವೀಕೃತ ದೇವಸ್ಥಾನದ ಉದ್ಘಾಟನೆ ಶುಕ್ರವಾರ ನೆರವೇರಿತು.

ದೇವತೆ ಉತ್ಸವ ಮೂರ್ತಿಯನ್ನು ಅಲಂಕರಿಸಿ ಪೂಜಾ ಕುಣಿತದೊಂದಿಗೆ ಉತ್ಸವ ನಡೆಸಲಾಯಿತು. ನೆರೆದಿದ್ದ ಭಕ್ತರು ದೇವರ ಉತ್ಸವ ಕಣ್ತುಂಬಿಕೊAಡರು. ಬಳಿಕ ದೇವಸ್ಥಾನದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಧಾರ್ಮಿಕ ವಿಧಿವತ್ತಾಗಿ ನಡೆದವು.

ಶಾಸಕ ಎ.ಟಿ. ರಾಮಸ್ವಾಮಿ, ಅರೇಮಾದನಹಳ್ಳಿ ವಿಶ್ವ ಬ್ರಾಹ್ಮಣ ಮಠದ ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿ, ಬಸವಾಪಟ್ಟಣ ತೋಟಂದಾರ್ಯ ಮಠದ ಶ್ರೀ ಸ್ವತಂತ್ರ ಬಸವಲಿಂಗ ಶಿವಯೋಗಿ, ಕೆಸವತ್ತೂರು ಮಠದ ಶ್ರೀ ಬಸವರಾಜೇಂದ್ರ ಸ್ವಾಮೀಜಿ, ತೇಜೂರು ಮಠದ ಶ್ರೀ ಕಲ್ಯಾಣ ಸ್ವಾಮೀಜಿ ಹಾಗೂ ಅಪಾರ ಭಕ್ತರು ಪಾಲ್ಗೊಂಡಿದ್ದರು.ರ

Post a Comment

0 Comments