ಅರಕಲಗೂಡು: ತಾಲೂಕಿನ ಪ್ರಭಾವಿ ರಾಜಕಾರಣಿ ಮಾಜಿ ಸಚಿವ ಎ. ಮಂಜು ಮಂಗಳವಾರ ನಡೆದ ಬೆಂಬಲಿಗರ ಸಭೆಯಲ್ಲಿ ಬಿಜೆಪಿ ಪಕ್ಷದ ನಡೆಗೆ ಬೇಸತ್ತು ಬಿಕ್ಕಳಿಸಿ ಕಣ್ಣೀರು ಹನಿ ಒರೆಸಿ ಅತ್ತ ಪ್ರಸಂಗಕ್ಕೆ ನೆರೆದಿದ್ದ ಕಾರ್ಯಕರ್ತರು ಮೂಕ ಸಾಕ್ಷಿಯಾದರು.
ಇಂದು ಆಯೋಜಿಸಿದ್ದ ಬೆಂಬಲಿಗರ ಸಭೆಯಲ್ಲಿ ಮಾತು ಮುಂದುವರೆಸಿದ ಅವರು, ಬಿಜೆಪಿ ಪಕ್ಷದಿಂದ ಮೊನ್ನೆ ನಡೆದ ಬೆಳವಣಿಗೆ ತುಂಬಾ ನೋವು ತಂದಿದೆ ಎಂದು ಕಣ್ಣೀರಾದರು.
ಪಕ್ಷದ ಬೆಳವಣಿಗೆಗೆ ಶ್ರಮಿಸುತ್ತಿದ್ದರೂ ಏಕಾಏಕಿ ಜವಾಬ್ದಾರಿ ಕಿತ್ತುಕೊಂಡಿದ್ದ ನೋವಾಯಿತು ಎಂದು ಗದ್ಹದಿತರಾದರು. ಈ ವೇಳೆ ನೆರೆದಿದ್ದ ಕಾರ್ಯಕರ್ತರು ಎ. ಮಂಜು ಪರ ಜೈಕಾರ ಮೊಳಗಿಸಿದರು.
ಬಿಜೆಪಿ ಶಿಸ್ತು ಕ್ರಮಕ್ಕೆ ಮುಂದಾಗಿದ್ದು ಒಳ್ಳೆಯದಾಗಿದ್ದು ಮಗನ ಪರ ಚುನಾವಣೆ ನಡೆಸಲು ಅನುಕೂಲಕರ ವಾತಾವರಣ ಕಲ್ಪಿಸಿದರು. ಜಿಲ್ಲೆಯಲ್ಲಿ ವಿಧಾನ ಪರಿಷತ್ ಚುನಾವಣೆಯಲ್ಲಿ ಯಾವ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡಬೇಕು ಎನ್ನುವ ಕುರಿತು ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಮತ್ತು ಮುಖಂಡರ ಅಭಿಪ್ರಾಯ ಪಡೆದು ಮುನ್ನಡೆಯುವುದಾಗಿ ತಿಳಿಸಿದರು.
0 Comments