ಅರಕಲಗೂಡು: ಮನುಷ್ಯತ್ವದಿಂದ ಮಾನವರಾಗಿ ಬದುಕುವಂತೆ ಸಮಾಜಕ್ಕೆ ಸಂದೇಶ ಸಾರಿದ ಕನಕದಾಸರ ಜೀವನದ ಮೌಲ್ಯಗಳು ಹಾಗೂ ವಿಚಾರಧಾರೆಗಳು ಮನುಕುಲದ ಉದ್ದಾರಕ್ಕೆ ದಾರಿದೀಪವಿದ್ದಂತೆ ಎಂದು ತಾಲೂಕು ಕಚೇರಿ ಅಧಿಕಾರಿ ಲೋಬೋ ತಿಳಿಸಿದರು.
ಪಟ್ಟಣದ ಮಿನಿ ವಿಧಾನಸೌಧ ಸಭಾಂಗಣದಲ್ಲಿ ಸೋಮವಾರ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಕನಕ ಜಯಂತಿ ಮತ್ತು ಒನಕೆ ಓಬವ್ಚ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗಾಳಿ, ಬೆಳಕು, ನೀರಿಗೆ ಇಲ್ಲದ ಜಾತಿ ಮತ ಧರ್ಮ ಮನುಷ್ಯವಕುಲಕ್ಕೆ ಏಕೆ ಎಂದು ಮಾನವತ್ವದ ಸಂದೇಶ ಸಾರಿಸ ಕನಕದಾಸರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದರು.
ಒನಕೆ ಹಿಡಿದು ದುಷ್ಟರನ್ನು ಸಂಹರಿಸಿದ ವೀರಮಹಿಳೆ ಓಬವ್ವ ನಾಡು ನುಡಿ ಉಳಿವಿಗೆ ಶ್ರಮಿಸಿದ್ದಾರೆ ಎಂದು ಹೇಳಿದರು.
ಶಿರಸ್ತೇದಾರ್ ಭಾನುಪ್ರಕಾಶ್, ಗ್ರಾಮ ಲೆಕ್ಕಾಧಿಕಾರಿಗಳಾದ ವಿನಾಯಕ್ ಹಿರೇಮಠ್, ಕಿರಣ್ ಕುಮಾರ್, ಕಾವ್ಯ, ನಂದಿನಿ, ಮಾಲಾಶ್ರೀ, ಸಿಬ್ಬಂದಿ ಇದ್ದರು.
0 Comments